ಹೊಸಕೋಟೆಯ ಅವಿಮುಕ್ತೇಶ್ವರ ದೇಗುಲದ ಹೊಸ ರಥ ನಿರ್ಮಾಣಕ್ಕೆ ಮೈಸೂರು ಜಿಲ್ಲೆಯ ಹುಣಸೂರಿನಿಂದ ತರಲಾದ ಮರದ ತುಂಡುಗಳಿಗೆ ಮಾಜಿ ಸಂಸದ ಬಿಎನ್ ಬಚ್ಚೇಗೌಡ, ಶಾಸಕ ಶರತ್ ಬಚ್ಚೇಗೌಡ ಪೂಜೆ ಸಲ್ಲಿಸಿದರು.
ಹೊಸಕೋಟೆ: ನಗರದಲ್ಲಿ ಮೇ12 ರಂದು ನಡೆಯಲಿರುವ ಅವಿಮುಕ್ತೇಶ್ವರ ರಥೋತ್ಸವ, ಧರ್ಮರಾಯ ಮತ್ತು ದ್ರೌಪದಾಂಬ ಕರಗ ಮಹೋತ್ಸವದ ಅಂಗವಾಗಿ ವಿವಿಧ ಇಲಾಖೆಗಳ ಅಧಿಕಾರಿಗಳ ಮತ್ತು ಮುಖಂಡರ ಸಭೆಯನ್ನು ನಗರದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ಕರೆಯಕಲಾಗಿತ್ತು.
ರಥೋತ್ಸವ ಮತ್ತು ಕರಗ ಮಹೋತ್ಸವ ಸುಸೂತ್ರವಾಗಿ ನಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕ ಶರತ್ ಬಚ್ಚೇಗೌಡ, ಅಧಿಕಾರಿಗಳಿಗೆ ಸೂಚಿಸಿದರು. ರಥೋತ್ಸವ ಸಮಿತಿ ಸಂಚಾಲಕರನ್ನಾಗಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವಮೂರ್ತಿ ಅವರನ್ನು ನೇಮಕ ಮಾಡಲಾಯಿತು.
ರಥ ನಿರ್ಮಾಣಕ್ಕೆ ಹುಣಸೂರಿನಿಂದ ತರಿಸಲಾದ ಮರದ ದಿಮ್ಮೆಗಳಿಗೆ ಪೂಜೆ ಸಲ್ಲಿಸಲಾಯಿತು. ಹೊಸ ರಥ ನಿರ್ಮಾಣಕ್ಕೆ ಹುಣಸೂರಿನಿಂದ ಮರದ ತುಂಡುಗಳನ್ನು ತರಲಾಗಿದ್ದು ಆರು ತಿಂಗಳಲ್ಲಿ ರಥ ನಿರ್ಮಾಣ ಕಾರ್ಯ ಮುಗಿಯಲಿದೆ. ಮುಂದಿನ ವರ್ಷ ರಥೋತ್ಸವಕ್ಕೆ ಈ ಹೊಸ ರಥ ಬಳಸಲಾಗುವುದು. ಈ ಬಾರಿ ಹಳೆಯ ರಥವನ್ನೇ ಬಳಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ, ತಹಸೀಲ್ದಾರ್ ಸೋಮಶೇಖರ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾ ಅಧಿಕಾರಿ ಡಾ.ಸಿ.ಎನ್.ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್, ಕೇಶವ್ ಮೂರ್ತಿ, ಎಚ್.ಎಂ.ಸುಬ್ಬರಾಜು, ಬಿ.ವಿ.ಬೈರೇಗೌಡ, ವಾಸುದೇವಯ್ಯ, ರಾಮಚಂದ್ರಪ್ಪ, ಜಯರಾಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.