ADVERTISEMENT

ಬಕ್ರೀದ್‌ ತ್ಯಾಗ, ಬಲಿದಾನದ ಪ್ರತೀಕ

ಜಾಮೀಯ ಅಹಲೇ ಅಹದೀಸ್‌ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 6:03 IST
Last Updated 10 ಜುಲೈ 2022, 6:03 IST
ದೇವನಹಳ್ಳಿ ಪಟ್ಟಣದ ಜಾಮೀಯ ಅಹಲೇ ಅಹದೀಸ್‌ ಮಸೀದಿಯಲ್ಲಿ ಬಕ್ರೀದ್‌ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ದೇವನಹಳ್ಳಿ ಪಟ್ಟಣದ ಜಾಮೀಯ ಅಹಲೇ ಅಹದೀಸ್‌ ಮಸೀದಿಯಲ್ಲಿ ಬಕ್ರೀದ್‌ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು   

ದೇವನಹಳ್ಳಿ: ತ್ಯಾಗ, ಬಲಿದಾನದ ಪ್ರತೀಕವಾಗಿರುವ ಬಕ್ರೀದ್‌ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ಪಟ್ಟಣದ ಜಾಮೀಯ ಅಹಲೇ ಅಹದೀಸ್‌(ಸುನ್ನಿ) ಮಸೀದಿಯಲ್ಲಿ ಶನಿವಾರ ಹಬ್ಬದ ಅಂಗವಾಗಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮಸೀದಿ ಅಧ್ಯಕ್ಷ ಖುದ್ದೂಸ್‌ ಪಾಷಾ ಮಾತನಾಡಿ,ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದ ಈದ್ಗಾ ಮೈದಾನಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲು ಆಗುತ್ತಿಲ್ಲ. ಈದ್ಗಾಕ್ಕೆ ತೆರಳಲು ಸಾಧ್ಯವಾಗದ ಸಂದರ್ಭದಲ್ಲಿ ಮಸೀದಿಗಳಲ್ಲಿಯೇ ಈದ್‌ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.

ಬಕ್ರೀದ್‌ನಲ್ಲಿ ಹಜರತ್‌ ಇಬ್ರಾಹಿಂ ಅವರ ಜೀವನದಲ್ಲಿ ಆದಂತಹ ಘಟನೆಯನ್ನು ಮೆಲುಕು ಹಾಕುವುದರ ಮೂಲಕ ಹಬ್ಬ ಆಚರಿಸಲಾಗುತ್ತದೆ ಎಂದರು.

ADVERTISEMENT

ಕರ್ನಾಟಕದಲ್ಲಿ ಮಂಗಳೂರು ಸೇರಿದತೆ ವಿವಿಧೆಡೆ ಚಂದ್ರ ಕಾಣಿಸಿದ್ದಾ ನೆಂಬ ಮಾಹಿತಿ ಆಧಾರದಲ್ಲಿ ಹಬ್ಬ ಆಚರಿಸುತ್ತಾರೆ. ಮೂರು ದಿನಗಳ ಹಬ್ಬ ಇದಾಗಿದೆ. ಶನಿವಾರ, ಭಾನುವಾರ, ಸೋಮವಾರದಂದು ಅನು ಕೂಲಕ್ಕೆ ತಕ್ಕಂತೆ ಆಚರಿಸಿಕೊಂಡು ಬರ ಲಾಗುತ್ತಿದೆ. ಹಿಂದೂ-ಮುಸ್ಲಿಂ ಬಾಂಧ ವರು ಒಗ್ಗೂಡಿ ಆಚರಿಸುವ ಪವಿತ್ರ ಹಬ್ಬ ಇದಾಗಿದೆ ಎಂದು ತಿಳಿಸಿದರು.

ಉಪನ್ಯಾಸಕ ಡಾ.ಶಫೀ ಅಹಮದ್‌ ಮಾತನಾಡಿ, ಬಕ್ರೀದ್‌ ಅನ್ನು ಸಡಗರದಿಂದ ಆಚರಿಸಲಾಗುತ್ತಿದೆ. ಮಸೀದಿಯ ಸಮೂಹ ಮತ್ತು ಮುಖಂಡರ ಸಹಕಾರದೊಂದಿಗೆ ಆಚರಣೆ ಮಾಡಲಾಗುತ್ತಿದೆ. ಎಲ್ಲರೂ ಒಗ್ಗೂಡಿ ಪ್ರತಿ ಹಬ್ಬದಲ್ಲಿಯೂ ಮಸೀದಿಯಲ್ಲಿ ಪ್ರತ್ಯೇಕವಾಗಿ ಮಹಿಳೆಯರು ಮತ್ತು ಪುರುಷರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಹಬ್ಬದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಮಸೀದಿಯಲ್ಲಿಯೇ ಆಗಮಿಸಿದ್ದ ಗಣ್ಯರು ಮತ್ತು ಮುಸ್ಲಿಂ ಸಮುದಾಯದವರುಮಾಂಸಾಹಾರದ ಭೋಜನ ಸವಿದರು.

ಜಾಮೀಯ ಅಹಲೇ ಅಹದೀಸ್‌ ಮಸೀದಿಯ ಕಾರ್ಯದರ್ಶಿ ಎ.ಎಸ್‌. ಇಬ್ರಾಹಿಂ, ಪಂಡಿತ ಅಬ್ದುಲ್‌ ಜಬ್ಬಾರ್, ಮುಖಂಡರಾದ ವಾಜೀದ್, ಜಾವೀದ್, ಹೈದರ್‌ ಸಾಬ್, ಷಂಶೀರ್‌ ಅಹಮದ್‌ (ತನು), ಆರೀಫ್‌ ಖಾನ್, ತರಕಾರಿ ಬಾಬು, ಜಮಾಯತ್‌ನ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.