ADVERTISEMENT

ಒತ್ತುವರಿಯಾಗಿದ್ದ ಬಂಡಿ ರಸ್ತೆ ತೆರವು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 3:28 IST
Last Updated 20 ಸೆಪ್ಟೆಂಬರ್ 2020, 3:28 IST
ಆನೇಕಲ್ ತಾಲ್ಲೂಕಿನ ಜಿಗಣಿಯಲ್ಲಿ ಒತ್ತುವರಿಯಾಗಿದ್ದ ನಕಾಶೆ ಬಂಡಿ ದಾರಿಯನ್ನು ತಹಶೀಲ್ದಾರ್ ಸಿ.ಮಹಾದೇವಯ್ಯ ಅವರು ತೆರವುಗೊಳಿಸಿದರು
ಆನೇಕಲ್ ತಾಲ್ಲೂಕಿನ ಜಿಗಣಿಯಲ್ಲಿ ಒತ್ತುವರಿಯಾಗಿದ್ದ ನಕಾಶೆ ಬಂಡಿ ದಾರಿಯನ್ನು ತಹಶೀಲ್ದಾರ್ ಸಿ.ಮಹಾದೇವಯ್ಯ ಅವರು ತೆರವುಗೊಳಿಸಿದರು   

ಆನೇಕಲ್: ಜಿಗಣಿಯಲ್ಲಿ ಒತ್ತುವರಿಯಾಗಿದ್ದ ನಕಾಶೆ ಬಂಡಿ ದಾರಿಯನ್ನು ತಹಶೀಲ್ದಾರ್‌ ಸಿ.ಮಹಾದೇವಯ್ಯ ಅವರು ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಜಿಗಣಿಯ ಸರ್ವೆ ನಂ.442ರಲ್ಲಿ ನಕಾಶೆ ಕಂಡ ಬಂಡಿದಾರಿಯನ್ನು ಒತ್ತುವರಿ ಮಾಡಿ ಜನರ ಓಡಾಟಕ್ಕೆ ತೊಂದರೆ ಮಾಡಿದ್ದರು. ಈ ಸಂಪರ್ಕ ರಸ್ತೆಯ ಮೂಲಕ ಕಾಳಬೈರವೇಶ್ವರ ಬಡಾವಣೆಗೆ ನೇರ ದಾರಿಯಿತ್ತು. ಆದರೆ ಮಧುಸೂದನ್‌ರೆಡ್ಡಿ ಅವರು ಬಂಡಿರಸ್ತೆ ಅಡ್ಡಗಟ್ಟಿದ್ದರಿಂದ ಬಡಾವಣೆಗೆ ತೆರಳಬೇಕಾದರೆ ತೊಂದರೆಯಾಗುತ್ತಿತ್ತು. ಹಾಗಾಗಿ ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಸರ್ವೆ ಇಲಾಖೆಯಿಂದ ಮೋಜಿಣಿದಾರರು ಸರ್ವೆ ನಡೆಸಿದ್ದರು. ರಸ್ತೆಯನ್ನು ಒತ್ತುವರಿ ಮಾಡಿರುವುದನ್ನು ಗುರುತಿಸಿದ್ದರಿಂದ ಕಾರ್ಯಾಚರಣೆ ನಡೆಸಿ ರಸ್ತೆಯನ್ನು ತೆರವುಗೊಳಿಸಲಾಗಿದೆ ಎಂದು ತಹಶೀಲ್ದಾರ್‌ ಸಿ.ಮಹಾದೇವಯ್ಯ ತಿಳಿಸಿದರು. ಉಪತಹಶೀಲ್ದಾರ್‌ ಬಸವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT