ADVERTISEMENT

ದೊಡ್ಡಬಳ್ಳಾಪುರ- ಧರಣಿ ತೆರವುಗೊಳಿಸಲು ಬಿಬಿಎಂಪಿ ಮಾರ್ಷಲ್‌ಗಳ ಬಳಕೆ: ಜನರ ಆಕ್ರೋಶ

ಕಸ ವಿಲೇವಾರಿ ಘಟಕ ವಿರೋಧಿಸಿ ಹೋರಾಟ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 6:08 IST
Last Updated 5 ಡಿಸೆಂಬರ್ 2021, 6:08 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿಯ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಕಸದ ಲಾರಿಗಳು ಬಾರದಂತೆ ಧರಣಿ ನಡೆಸುತ್ತದ್ದ ಸ್ಥಳೀಯ ಗ್ರಾಮಸ್ಥರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಚಿಗರೇನಹಳ್ಳಿಯ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಕ್ಕೆ ಕಸದ ಲಾರಿಗಳು ಬಾರದಂತೆ ಧರಣಿ ನಡೆಸುತ್ತದ್ದ ಸ್ಥಳೀಯ ಗ್ರಾಮಸ್ಥರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದರು.   

ದೊಡ್ಡಬಳ್ಳಾಪುರ:ಚಿಗರೇನಹಳ್ಳಿಯ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕದ ವಿರುದ್ಧ ಧರಣಿ ನಡೆಸುತ್ತಿರುವ 50ಕ್ಕೂ ಹೆಚ್ಚು ಗ್ರಾಮಸ್ಥರು ಮತ್ತು ರೈತರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.

ಧರಣಿ ಸ್ಥಳಕ್ಕೆ ಬಂದ ತಹಶೀಲ್ದಾರ್ ಟಿ.ಎಸ್. ಶಿವರಾಜು, ಡಿವೈಎಸ್‌ಪಿ ನಾಗರಾಜು ಅವರು ಧರಣಿ ಹಿಂಪಡೆಯುವಂತೆ ಸೂಚಿಸಿದರು. ಇದಕ್ಕೆ ಒಪ್ಪದೆ ಪ್ರತಿಭಟನಕಾರರು ಧರಣಿ ಮುಂದುವರಿಸಿದರು.

ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌ ನೇತೃತ್ವದಲ್ಲಿ ಬಿಬಿಎಂಪಿ ಮಾರ್ಷಲ್‌ಗಳು ಹಾಗೂ ಪೊಲೀಸರು ಧರಣಿ ನಿರತರ ಶಾಮಿಯಾನ ತೆರವುಗೊಳಿಸಲು ಮುಂದಾದರು. ಇದಕ್ಕೆ ಅಡ್ಡಿಪಡಿಸಿದ ಧರಣಿನಿರತರನ್ನು ಬಿಬಿಎಂಪಿ ಮಾರ್ಷ್‌ಲ್‌ಗಳು ಮತ್ತು ಪೊಲೀಸರು ವಶಕ್ಕೆ ಪಡೆದು ಕರೆದೊಯ್ದುರು.

ADVERTISEMENT

ಸುಮಾರು 200ಕ್ಕೂ ಹೆಚ್ಚು ಜನ ಬಿಬಿಎಂಪಿ ಮಾರ್ಷಲ್‌ಗಳು ಮತ್ತು ಪೊಲೀಸರನ್ನು ಧರಣಿ ಸ್ಥಳಕ್ಕೆ ಕರೆತರಲಾಗಿತ್ತು. ಪ್ರತಿರೋಧ ಒಡ್ಡಿದ ಧರಣಿನಿರತರತ್ತ ಪೊಲೀಸರು ಬೀಸಿದ ಲಾಠಿಯಿಂದ ತಣ್ಣೀರನಹಳ್ಳಿ ಗ್ರಾಮದ ರೈತ ಸುರೇಶ್‌ ಹಲ್ಲುಗಳು ಮುರಿದಿವೆ. ಕೊರಟಗೆರೆ ತಾಲ್ಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶಬ್ಬೀರ್‌ ಬಾಷಾ ಅವರ ಸೊಂಟಕ್ಕೆ ಪೆಟ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.