ADVERTISEMENT

ಹೊಸಕೋಟೆ | ಜಮೀನಿನಲ್ಲಿ ವೈದ್ಯಕೀಯ ತ್ಯಾಜ್ಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2024, 14:49 IST
Last Updated 3 ಸೆಪ್ಟೆಂಬರ್ 2024, 14:49 IST
ಹೊಸಕೋಟೆ ತಾಲೂಕಿನ ಏಕರಾಜಪುರ ರೈತರೊಬ್ಬರ ಕೃಷಿ ಜಮೀನಿನಲ್ಲಿ ಸುಟ್ಟಿರುವ ವೈದ್ಯಕೀಯ ತ್ಯಾಜ್ಯ
ಹೊಸಕೋಟೆ ತಾಲೂಕಿನ ಏಕರಾಜಪುರ ರೈತರೊಬ್ಬರ ಕೃಷಿ ಜಮೀನಿನಲ್ಲಿ ಸುಟ್ಟಿರುವ ವೈದ್ಯಕೀಯ ತ್ಯಾಜ್ಯ    

ಹೊಸಕೋಟೆ: ತಾಲ್ಲೂಕಿನ ಏಕರಾಜಪುರ ಬಳಿಯ ಜಮೀನುವೊಂದಕ್ಕೆ ವೈದ್ಯಕೀಯ ತ್ಯಾಜ್ಯ ಸುರಿಯಲಾಗುತ್ತಿದೆ. ಇದರಿಂದ ವ್ಯವಸಾಯಕ್ಕೆ ಅಡ್ಡಿಯಾಗಿದೆ ಎಂದು ಏಕರಾಜಪುರ ಗ್ರಾಮದ ರೈತರು ಆರೋಪಿಸಿದ್ದಾರೆ.

ತ್ಯಾಜ್ಯವನ್ನು ಬೆಂಕಿ ಹಚ್ಚಿ ನಾಶಪಡಿಸಿ, ಪರಿಸರ ಕಲುಷಿತಗೊಳಿಸುವುದರ ಜತೆಗೆ ಸುತ್ತಮುತ್ತಲಿನ  ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತೆ ಆಗಿದೆ. ಕಳೆದ ಒಂದು ವರ್ಷದಿಂದ ಈ ಚಟುವಟಿಕೆ ನಡೆಸಲಾಗುತ್ತಿದೆ. ತ್ಯಾಜ್ಯ ಸುರಿಯುತ್ತಿರುವ ಕಂಪನಿಯ ಆಡಳಿತ ಮಂಡಳಿಗೆ ಮಾಹಿತಿ ನೀಡಿದರೂ ಕ್ರಮಕೈಗೊಂಡಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT