ADVERTISEMENT

ನವೋದಯ ಕಾವ್ಯ ಪರಂಪರೆಯ ಪ್ರಭಾವಶಾಲಿ ಕವಿ ದ.ರಾ. ಬೇಂದ್ರೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 7:44 IST
Last Updated 4 ಫೆಬ್ರುವರಿ 2021, 7:44 IST
ವಿದ್ಯಾನಿಧಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎನ್. ಗಿರೀಶ್ ಕಾರ್ಯಕ್ರಮ‌ ಉದ್ಘಾಟಿಸಿದರು
ವಿದ್ಯಾನಿಧಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎನ್. ಗಿರೀಶ್ ಕಾರ್ಯಕ್ರಮ‌ ಉದ್ಘಾಟಿಸಿದರು   

ದೊಡ್ಡಬಳ್ಳಾಪುರ: ‘ಬೇಂದ್ರೆ ಅವರುಪ್ರಕೃತಿ ಮತ್ತು ಮನುಷ್ಯರ ನಡುವಿನ ನಂಟನ್ನು ಕಾವ್ಯದ ವಸ್ತುವಾಗಿಸಿಕೊಂಡು ನವೋದಯ ಕಾವ್ಯ ಪರಂಪರೆಗೆ ಮುನ್ನುಡಿ ಬರೆದ ಪ್ರಭಾವಶಾಲಿ ಕವಿ’ ಎಂದು ವಿದ್ಯಾನಿಧಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎನ್. ಗಿರೀಶ್‌ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಪಾಲನಜೋಗಳ್ಳಿ ಎಚ್.ವಿ. ಫಾರಂ ಹೌಸ್‌ನಲ್ಲಿ ನಡೆದ ವರಕವಿ ದ.ರಾ. ಬೇಂದ್ರೆ ಅವರ ಕವಿದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಪ್ರಮೀಳಾ ಮಹಾದೇವ್ ಪ್ರಾಸ್ತಾವಿಕ ಮಾತನಾಡಿದರು. ತಾಲ್ಲೂಕಿನ ಹಿರಿ-ಕಿರಿಯ ಕವಿಗಳು ಬೇಂದ್ರೆ ಅವರ ಕವನಗಳ ವಾಚನ ಮತ್ತು ಸ್ವರಚಿತ ಕವನಗಳ ವಾಚನ ಮಾಡುವ ಮೂಲಕ ‘ಕಾವ್ಯ ನಮನ’ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಎಚ್.ವಿ. ವೆಂಕಟೇಶ್, ಕನ್ನಡಪರ ಹೋರಾಟಗಾರ ಕೆ.ಕೆ. ವೆಂಕಟೇಶ್, ಧರ್ಮಸ್ಥಳ ಸ್ವಸಹಾಯ ಸಂಘದ ಪಾಲನಜೋಗಳ್ಳಿ ಒಕ್ಕೂಟದ ಅಧ್ಯಕ್ಷೆ ಲೀಲಾವತಿ ಭಾಗವಹಿಸಿದ್ದರು.

ADVERTISEMENT

ಕವಿಗಳಾದ ರಾಜೇಂದ್ರಕುಮಾರ್, ಮುಕ್ಕೇನಹಳ್ಳಿ ರಾಜೇಶ್, ನಾಗದಳ ಸಿ. ನಟರಾಜ್, ಶಾಹಿದ್‌ ಉಲ್ಲಾ ಖಾನ್, ನಂಜುಂಡ ಅಮಾಸ, ಅಂಜನ್‌ಗೌಡ, ಗಂಗರಾಜ್‌ ಶಿರವಾರ, ಜಿ. ನಾಗೇಂದ್ರ, ವಿ.ಆರ್. ಕೃಷ್ಣಮೂರ್ತಿ, ಎನ್. ವೆಂಕಟೇಶ್ ಕವನ
ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.