ADVERTISEMENT

ರಾಜಕೀಯ ಕಡೆಗಣನೆಗೆ ಒಳಗಾದ ಭೋವಿ ಸಮುದಾಯ: ಭೋವಿ‌ ಸಂಘ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2023, 7:56 IST
Last Updated 23 ಏಪ್ರಿಲ್ 2023, 7:56 IST
ದೇವನಹಳ್ಳಿ ಸಾದಹಳ್ಳಿಯಲ್ಲಿ ಮಾಜಿ ಶಾಸಕ‌ ವೆಂಕಟಸ್ವಾಮಿ ಶ್ರದ್ಧಾಂಜಲಿ ಸಭೆಯಲ್ಲಿ ಭೋವಿ ಸಮುದಾಯದ ಮುಖಂಡರು ಭಾಗವಹಿಸಿದ್ದರು
ದೇವನಹಳ್ಳಿ ಸಾದಹಳ್ಳಿಯಲ್ಲಿ ಮಾಜಿ ಶಾಸಕ‌ ವೆಂಕಟಸ್ವಾಮಿ ಶ್ರದ್ಧಾಂಜಲಿ ಸಭೆಯಲ್ಲಿ ಭೋವಿ ಸಮುದಾಯದ ಮುಖಂಡರು ಭಾಗವಹಿಸಿದ್ದರು   

ದೇವನಹಳ್ಳಿ: ಭೋವಿ ಸಮುದಾಯವನ್ನು ಎಲ್ಲ‌ ಪಕ್ಷದವರು ಕಡೆಗಣಿಸುತ್ತಿದ್ದಾರೆ. ಗ್ರಾಮ ಪಂ‌ಚಾಯತ್‌ನಿಂದ ಹಿಡಿದು ದೆಹಲಿಯ ಸಂಸತ್ ಚುನಾವಣೆಯವರೆಗೂ ಸೂಕ್ತವಾದ ಸ್ಥಾನಮಾನ ದೊರೆಯುತ್ತಿಲ್ಲ‌ ಎಂದು ತಾಲ್ಲೂಕು ಭೋವಿ‌ ಸಂಘದ ಉಪಾಧ್ಯಕ್ಷರಾದ ಗೋಪಾಲ್ ಬೇಸರ ವ್ಯಕ್ತಪಡಿಸಿದರು.

ತಾಲ್ಲೂಕಿನ ಸಾದಹಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಜಿ ಶಾಸಕ ವೆಂಕಟಸ್ವಾಮಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಸಮುದಾಯದ ರಾಜಕೀಯ ಭವಿಷ್ಯದ ಹಿತದೃಷ್ಟಿಯಿಂದ ಎಲ್ಲ ಮುಖಂಡರು ಪಕ್ಷ ಭೇದ ಮರೆತು, ಪ್ರತಿಯೊಂದು ಗ್ರಾಮದಲ್ಲಿಯೂ ಇರುವ ಸಮುದಾಯದ ಯುವಕರನ್ನು ಸಂಘಟಿಸಿ ಪ್ರಬಲ ಶಕ್ತಿಯಾಗುವ ಅಗತ್ಯತೆ ಇದೆ ಎಂದು ಹೇಳಿದರು.

‘ಎಲ್ಲ ಸಮುದಾಯಗಳ ಏಳಿಗೆಗೆ ಧೀಮಂತ ನಾಯಕ ವೆಂಕಟಸ್ವಾಮಿ ಅವರು ಶ್ರಮಿಸಿದ್ದರು. ಅವರ ಮರಣದ ನಂತರ ರಾಜಕೀಯವಾಗಿ ಸಮುದಾಯವನ್ನು ಮಟ್ಟ ಹಾಕುವ ಷ್ಯಡಂತ್ರ ನಡೆಯುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಅಂತಹ‌ ದುಷ್ಟ ಶಕ್ತಿಗಳಿಗೆ ತಕ್ಕ ಉತ್ತರ ನೀಡಬೇಕು‘ ಎಂದು ಕರೆ ನೀಡಿದರು.

ADVERTISEMENT

ಜಿಲ್ಲಾ ಪಂಚಾಯಿತಿ‌ ಮಾಜಿ ಅಧ್ಯಕ್ಷೆ ಅನಂತ ಕುಮಾರಿ ಚಿನ್ನಪ್ಪ ಮಾತನಾಡಿ, ‘ದುಃಖದ ವಾತಾವರಣದಲ್ಲಿ ಧೀಮಾಂತ ನಾಯಕರನ್ನು ನಡೆಸಿಕೊಳ್ಳುತ್ತಿರುವ ರೀತಿ ಬೇಸರ‌ ತಂದಿದೆ. ಅವರ ಶಾಸಕರಾಗಿದ್ದ‌ ಸಮಯದಲ್ಲಿ ಎಲ್ಲರಿಗೂ ಸಹಾಯ ಮಾಡಿ, ಪ್ರತಿಯೊಬ್ಬರ ಅಭಿಪ್ರಾಯ ಸಂಗ್ರಹಿಸಿ ಜನ ಸೇವೆ ಮಾಡುತ್ತಿದ್ದರು‘ ಎಂದು ಸ್ಮರಿಸಿದರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸಮುದಾಯದ ಒಗ್ಗೂಡಿಸಿ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಹೇಳಿದರು.

ಭೋವಿ ಸಮುದಾಯದ ತಾಲ್ಲೂಕು ಅಧ್ಯಕ್ಷ ಎಸ್.ಕೆ.ತಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಮುರಳಿ, ಎಸ್.ಎಂ‌. ನಾರಾಯಣಸ್ವಾಮಿ, ಗೆದ್ದಳ‌ಪಾಳ್ಯ ಮುನಿರಾಜು, ಶ್ರೀನಿವಾಸ್, ದಾಸಣ್ಣ, ವೆಂಕಟಸ್ವಾಮಿ ಸಹೋದರರು, ಶಂಕರ್, ಮಂಜುನಾಥ್, ಸಿದ್ದಪ್ಪ, ಪ್ರಕಾಶ್, ದೇವರಾಜ್, ರವಿ ಕುಮಾರ್, ವಿಜಯಪುರ ಟೌನ್ ಅಧ್ಯಕ್ಷ ವಿ.ಶ್ರೀನಿವಾಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.