ADVERTISEMENT

ವಿಜಯಪುರ: ಬಿಎಂಟಿಸಿ ಬಸ್ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 1:56 IST
Last Updated 11 ನವೆಂಬರ್ 2025, 1:56 IST
ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ನೂತನವಾಗಿ ಸಂಚರಿಸಲಿರುವ ಬಿಎಂಟಿಸಿ ಬಸ್ ಸೌಲಭ್ಯ ಕಲ್ಪಿಸಿರುವುದು.
ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ನೂತನವಾಗಿ ಸಂಚರಿಸಲಿರುವ ಬಿಎಂಟಿಸಿ ಬಸ್ ಸೌಲಭ್ಯ ಕಲ್ಪಿಸಿರುವುದು.   

ವಿಜಯಪುರ (ದೇವನಹಳ್ಳಿ): ಪಟ್ಟಣದಿಂದ ಬೆಳಗ್ಗೆ 5ಕ್ಕೆ ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸಂಚರಿಸುತ್ತಿದ್ದ ಬಿಎಂಟಿಸಿ ಬಸ್  ಈಗ ಬೆಳಗಿನ ಜಾವ 4.30ಕ್ಕೆ ಹೊರಡಲಿದೆ ಎಂದು ದೇವನಹಳ್ಳಿ ಬಿಎಂಟಿಸಿ ವ್ಯವಸ್ಥಾಪಕ ಶಮೂನ್ ಪಾಷಾ ತಿಳಿಸಿದ್ದಾರೆ.

ಅಲ್ಲದೇ ಬೆಳಗ್ಗೆ 6ಕ್ಕೆ ಬೆಂಗಳೂರು ಕೆಂಪೇಗೌಡ ಬಸ್ ನಿಲ್ದಾಣದಿಂದ ಬೂದಿಗೆರೆ, ಬಾಗಲೂರು ಕಡೆಯಿಂದ ವಿಜಯಪುರಕ್ಕೆ ಬಸ್ ಸಂಚಾರ ಆರಂಭಗೊಂಡಿದೆ. ಮಧ್ಯಾಹ್ನ 3 ಗಂಟೆಗೆ ವಿಜಯಪುರ ಬಸ್ ನಿಲ್ದಾಣದಿಂದ ಬೂದಿಗೆರೆ, ಬಾಗಲೂರು, ಕೆಂಪೇಗೌಡ ಬಸ್ ನಿಲ್ದಾಣಕ್ಕೆ  ಬಿಎಂಟಿಸಿ ಬಸ್  ಸಂಚರಿಸಲಿದೆ ಎಂದು ಹೇಳಿದ್ದಾರೆ.

ವಿಜಯಪುರದಿಂದ ಈ ಹಿಂದೆ ಹೊಸಕೋಟೆ, ವೈಟ್ ಫೀಲ್ಡ್, ವರ್ತೂರು ಕೋಡಿ, ಮಾರತಳ್ಳಿ ಮುಖಾಂತರ ಬೆಂಗಳೂರಿನ ಕಲಾಸಿಪಾಳ್ಯದ ಕೃಷ್ಣರಾಜೇಂದ್ರ ಮಾರುಕಟ್ಟೆಗೆ ಖಾಸಗಿ ಮತ್ತು ಸರ್ಕಾರಿ ಬಸ್‍ ಸಂಚರಿಸುತ್ತಿದ್ದವು. ಈಗ ಸಂಚಾರ ಸ್ಥಗಿತಗೊಂಡಿರುವ ಕಾರಣ  ಪ್ರಯಾಣಿಕರಿಗೆ ತೊಂದರೆಯಾಗಿದೆ. ಈ ಭಾಗಕ್ಕೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು. ಪಟ್ಟಣದಿಂದ ಚಿಕ್ಕಬಳ್ಳಾಪುರಕ್ಕೆ ಶಾಲೆ,ಕಾಲೇಜು ಆರಂಭ ಮತ್ತು ಬಿಡುವಿನ ವೇಳೆ ಬಿಎಂಟಿಸಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಪ್ರಯಾಣಿಕರ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.