ADVERTISEMENT

ದೇವನಹಳ್ಳಿ ಚರಂಡಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ; ಕೊಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 2:16 IST
Last Updated 26 ಫೆಬ್ರುವರಿ 2026, 2:16 IST
ದೇವನಹಳ್ಳಿ ಪಟ್ಟಣದ ಬಿಬಿ ರಸ್ತೆಯ ಟಿಪ್ಪು ಸರ್ಕಲ್‌ ಬಳಿ ಅಪರಿಚಿತ ಮಹಿಳೆ ಶವ ಪತ್ತೆಯಾದ ಬೆನ್ನಲ್ಲೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು
ದೇವನಹಳ್ಳಿ ಪಟ್ಟಣದ ಬಿಬಿ ರಸ್ತೆಯ ಟಿಪ್ಪು ಸರ್ಕಲ್‌ ಬಳಿ ಅಪರಿಚಿತ ಮಹಿಳೆ ಶವ ಪತ್ತೆಯಾದ ಬೆನ್ನಲ್ಲೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು   

ದೇವನಹಳ್ಳಿ: ಪಟ್ಟಣದ ಟಿಪ್ಪು ಸರ್ಕಲ್ ಸಮೀಪದ ಚರಂಡಿಯಲ್ಲಿ ಅಪರಿಚಿತ ಮಹಿಳೆಯ ಶವ ಬುಧವಾರ ಪತ್ತೆಯಾಗಿದೆ.

ಸ್ಥಳೀಯರು ದುರ್ವಾಸನೆ ಗಮನಿಸಿ ಪರಿಶೀಲಿಸಿದಾಗ ಚರಂಡಿಯಲ್ಲಿ ಶವ ಕಂಡುಬಂದಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳೆ ಸುಮಾರು ಒಂದು ವಾರದ ಹಿಂದೆ ಚರಂಡಿಗೆ ಬಿದ್ದಿರಬಹುದೆಂದು ಶಂಕಿಸಲಾಗಿದೆ.

ನಿರಂತರವಾಗಿ ನೀರು ಹರಿದ ಪರಿಣಾಮ ಶವ ಕೊಳೆತು ಹುಳುಗಳು ಕಾಣಿಸಿಕೊಂಡಿವೆ. ಮಹಿಳೆಯ ತಲೆಯ ಭಾಗದಲ್ಲಿ ದಾರ ಕಂಡುಬಂದಿರುವುದರಿಂದ ಪ್ರಕರಣದ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಇದು ಕೊಲೆಯೋ ಅಥವಾ ಅಪಘಾತವೋ ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ.

ADVERTISEMENT

ಮಾಹಿತಿ ತಿಳಿದ ತಕ್ಷಣ ದೇವನಹಳ್ಳಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಹರ್ಷ ನೇತೃತ್ವದ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಘಟನೆ ಸಂಬಂಧ ಸ್ಥಳಕ್ಕೆ ಸೋಕೋ ತಂಡ ಭೇಟಿ ನೀಡಿ ಮಾದರಿ ಸಂಗ್ರಹಿಸಿದೆ.

ಘಟನಾ ಸ್ಥಳದಲ್ಲಿ ಶವ ನೋಡಲು ಸ್ಥಳೀಯರು ಮುಗಿಬಿದ್ದಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.