ADVERTISEMENT

ಸ್ಮಶಾನ ಒತ್ತುವರಿ: ಭೂಮಾಪನಕ್ಕೆ ತಂಡ ರವಾನೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 8:53 IST
Last Updated 20 ಫೆಬ್ರುವರಿ 2021, 8:53 IST

ಜಿ. ಹೊಸಹಳ್ಳಿ (ದೊಡ್ಡಬಳ್ಳಾಪುರ): ಇಲ್ಲಿನ ಪರಿಶಿಷ್ಟ ಜಾತಿಯವರ ಸ್ಮಶಾನದ ಜಮೀನನ್ನು ಕೆಲವರು ಒತ್ತುವರಿ ಮಾಡಿದ್ದಾರೆ ಎಂಬ ಆರೋಪದ ಕುರಿತು ತುರ್ತು ವರದಿ ಪಡೆಯಲು ಕಂದಾಯ ಸಚಿವ ಆರ್. ಅಶೋಕ ಅವರು ಅಧಿಕಾರಿಗಳ ತಂಡವನ್ನು ರವಾನಿಸಿದ್ದಾರೆ.

ಜಿ.‌ಹೊಸಹಳ್ಳಿ ಗ್ರಾಮದಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಆರಂಭಿಸಿರುವ ಕಂದಾಯ ಸಚಿವರು, ಪರಿಶಿಷ್ಟ ಜಾತಿ ಕಾಲೊನಿಯಲ್ಲಿ ಅಹವಾಲು ಆಲಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳು ಸ್ಮಶಾನ ಒತ್ತುವರಿ ಆಗಿರುವ ವಿಷಯ ಗಮನಕ್ಕೆ ತಂದರು. 3 ಎಕರೆ ವಿಸ್ತೀರ್ಣ ಇದ್ದ ಸ್ಮಶಾನ ಈಗ 1 ಎಕರೆಯಷ್ಟೇ ಉಳಿದಿದೆ.‌ ಸ್ಮಶಾನದ ಒಳಕ್ಕೆ ಮೃತದೇಹವನ್ನು ಕೊಂಡೊಯ್ಯುವುದಕ್ಕೂ ಅಸಾಧ್ಯವಾದ ಪರಿಸ್ಥಿತಿ ಇದೆ ಎಂದರು.

ತಕ್ಷಣವೇ ಸ್ಮಶಾನದ ಸ್ಥಳಕ್ಕೆ ಹೋಗಿ ಭೂಮಾಪನ ನಡೆಸಿ ವರದಿಯೊಂದಿಗೆ ಬರುವಂತೆ ಕಂದಾಯ ಹಾಗೂ ಭೂಮಾಪನ ಇಲಾಖೆಗಳ ಅಧಿಕಾರಿಗಳಿಗೆ ಅಶೋಕ ಆದೇಶಿಸಿದರು. ಅಧಿಕಾರಿಗಳು ಭೂಮಾಪನಕ್ಕೆ ತೆರಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.