ADVERTISEMENT

ಬಸ್ ಕೊರತೆ ಪ್ರಯಾಣಿಕರ ಪರದಾಟ 

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 12:59 IST
Last Updated 17 ಏಪ್ರಿಲ್ 2019, 12:59 IST
ದೇವನಹಳ್ಳಿಯಲ್ಲಿ ಖಾಸಗಿ ಬಸ್‌ಗೆ ಮೊರೆ ಹೋಗಿರುವ ಪ್ರಯಾಣಿಕರು 
ದೇವನಹಳ್ಳಿಯಲ್ಲಿ ಖಾಸಗಿ ಬಸ್‌ಗೆ ಮೊರೆ ಹೋಗಿರುವ ಪ್ರಯಾಣಿಕರು    

ದೇವನಹಳ್ಳಿ: ಲೋಕಸಭಾ ಚುನಾವಣೆ ಪ್ರಕ್ರಿಯೆಗೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಬಳಕೆ ಮಾಡಿಕೊಳ್ಳುತ್ತಿರುವ ಪರಿಣಾಮ ಪ್ರಯಾಣಿಕರು ಪರದಾಟ ಅನುಭವಿಸುವಂತಾಯಿತು.

ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ನಗರ ಕೇಂದ್ರ ರಾಜ್ಯ ಸಾರಿಗೆ ಸಂಸ್ಥೆ ಘಟಕಗಳಿಂದ ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಕ್ಕೆ 175 ಬಸ್‌ಗಳನ್ನು ಬಳಸಿಕೊಳ್ಳಲಾಗಿದೆ. ನಿತ್ಯ ಸಂಚರಿಸುವ ಒಂದು ಬಸ್ ರಸ್ತೆಗೆ ಇಳಿದಿಲ್ಲ. ಸಹಜವಾಗಿ ಖಾಸಗಿ ಬಸ್ ಸಂಚಾರವಿದ್ದರು ಪ್ರಯಾಣಿಕರ ಸಂಖ್ಯೆ ಹೆಚ್ಚಳದಿಂದಾಗಿ ಪರದಾಟ ಪಡುವಂತಾಗಿದೆ ಎಂಬುದು ಪ್ರಯಾಣಿಕರ ಅಳಲು.

ಪ್ರಯಾಣಿಕರಾದ ವಿಮಲ ಅವರ ಪ್ರಕಾರ, ‘ಎಲ್ಲರೂ ಕಾರು, ಜೀಪು ಮತ್ತು ದ್ವಿಚಕ್ರವಾಹನ ಹೊಂದಿರುವುದಿಲ್ಲ, ಆಸ್ಪತ್ರೆಗೆ ಹೋಗಬೇಕು, ಅನಿವಾರ್ಯವಾಗಿ ಹೊಗಲೇಬೇಕಾದ ಕಾರ್ಯಕ್ರಮಗಳಿಗೆ ತೆರಳಬೇಕು. ಎರಡು ದಿನ ಬಸ್ ಸಂಚಾರವಿಲ್ಲದಿದ್ದರೆ ಪ್ರಯಾಣಿಕರಿಗೆ ಎಷ್ಟು ಅನಾನುಕೂಲ ಎಂಬುದನ್ನು ಸಂಬಂಧಿಸಿದ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು’ ಎಂದರು.

ADVERTISEMENT

ಚುನಾವಣೆಗೆ ಅಧಿಕೃತ ದಿನ ನಿಗದಿಯಾಗಿ ಹೆಚ್ಚು ಕಡಿಮೆ ಒಂದು ತಿಂಗಳಾಗಿದೆ. ಏ.18 ರಂದು ಚುನಾವಣೆ ಎಂಬುದು ಸಾಮಾನ್ಯವಾಗಿ ಗೊತ್ತಿರುತ್ತದೆ ಎಂದು ಚುನಾವಣಾಧಿಕಾರಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.