ADVERTISEMENT

ವಿಜಯಪುರ: ದಾಖಲೆ ಇಲ್ಲದೇ ಎರಡು ವಾಹನದಲ್ಲಿ ಸಾಗಿಸುತ್ತಿದ್ದ 28 ಹಸು, ಕರು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 3:23 IST
Last Updated 2 ಜನವರಿ 2026, 3:23 IST
ಹಸುಕರುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ವಾಹನ
ಹಸುಕರುಗಳನ್ನು ಸಾಗಿಸುತ್ತಿದ್ದ ಕ್ಯಾಂಟರ್ ವಾಹನ   

ವಿಜಯಪುರ (ದೇವನಹಳ್ಳಿ): ದಾಖಲೆ ಇಲ್ಲದೇ ಎರಡು ವಾಹನದಲ್ಲಿ ಸಾಗಿಸುತ್ತಿದ್ದ 28 ಹಸು, ಕರುಗಳನ್ನು ಪೊಲೀಸರು ರಕ್ಷಿಸಿ ಪಟ್ಟಣದ ಸಮೀಪದ ಪದ್ಮಾವತಿ ಗೋಶಾಲೆಗೆ ಕಳಿಸಿದ್ದಾರೆ.

ಡಿ.30 ರಂದು ರಾತ್ರಿ 10.30ಕ್ಕೆ ಚಿಕ್ಕಬಳ್ಳಾಪುರ ಕಡೆಯಿಂದ ಬಂದಂತಹ ಕ್ಯಾಂಟರ್ ಮತ್ತು ಬಲೋರ ವಾಹನವನ್ನು ವಿಜಯಪುರ ಪಟ್ಟಣದಲ್ಲಿ ಪೊಲೀಸರು ತಡೆದು, ಪರಿಶೀಲಿಸಿದ್ದಾರೆ. ಆಗ ದಾಖಲೆಯಿಲ್ಲದೆ ಕ್ಯಾಂಟರ್‌ನಲ್ಲಿ 20 ಹಸುಕರು, ಬಲೋರ ವಾಹನದಲ್ಲಿ 8 ಹಸುಕರು ಅಮಾನೀಯವಾಗಿ ಸಾಗಿಸುತ್ತಿರುವುದು
ಕಂಡು ಬಂದಿದೆ.

ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ವಾಹನ ಮಾಲೀಕರಾದ ವೆಟ್ರಿವೇಲ್, ಮುರಳಿ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.