ADVERTISEMENT

ದೇವನಹಳ್ಳಿ | ಪಿಯು ಪರೀಕ್ಷೆ ಕಣ್ಗಾವಲಿಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಕಳವು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2025, 14:36 IST
Last Updated 9 ಮಾರ್ಚ್ 2025, 14:36 IST
.
.   

ದೇವನಹಳ್ಳಿ: ಪಟ್ಟಣದ ಬಿಬಿ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಪಿಯು ಪರೀಕ್ಷೆ ಕಣ್ಗಾವಲಿಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾವನ್ನು ಕಳ್ಳತನ ಮಾಡಲಾಗಿದೆ.

ಮಾರ್ಚ್ 1ರಿಂದ ಆರಂಭವಾದ ಪಿಯುಸಿ ಪರೀಕ್ಷೆ ಸಂಬಂಧ ಕರ್ನಾಟಕ ಫ್ರೌಢ ಶಿಕ್ಷಣ ಮಂಡಳಿಯ ಆದೇಶದಂತೆ ಪದವಿ ಪೂರ್ವ ಕಾಲೇಜಿನ ಕಟ್ಟಡದಲ್ಲಿ 16 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು.

ಮಾರ್ಚ್‌ 4ರಂದು ನಡೆದ ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್‌ ಪರೀಕ್ಷೆಯ ನಂತರ ಪಿಯು ಕಾಲೇಜಿನ ಕಟ್ಟಡದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾ ಕಾರ್ಯಾಚರಣೆ ಪರಿಶೀಲಿಸಿಕೊಂಡು ಕಾಲೇಜಿನ ಉಪ ಪ್ರಾಂಶುಪಾಲರಾದ ನೀಲಕಂಠ ಗವಂಕರ್‌ ಸಂಜೆ 5.30ಕ್ಕೆ ಮುಖ್ಯ ದ್ವಾರದ ಗೇಟ್‌ಗೆ ಬೀಗ ಹಾಕೊಂಡು ಹೋಗಿದ್ದಾರೆ.

ADVERTISEMENT

ಮಾರ್ಚ್‌ 5ರ ಬೆಳಿಗ್ಗೆ ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದಾಗ ಪಿಯು ಕಾಲೇಜಿನ ಕಾರಿಡಾರ್‌ನಲ್ಲಿ ಹಾಕಲಾಗಿದ್ದ ಐದು ಸಿಸಿ ಕ್ಯಾಮೆರಾವನ್ನು ಕಳ್ಳತನ ಮಾಡಲಾಗಿದ್ದು, ಇದಕ್ಕೆ ಸಂಪರ್ಕ ಕಲ್ಪಿಸಿದ್ದ ಕೇಬಲ್‌ಗಳನ್ನು ಕಿಡಿಗೇಡಿಗಳು ಕತ್ತರಿಸಿದ್ದಾರೆ.

ದೇವನಹಳ್ಳಿ ಟೌನ್‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.