ADVERTISEMENT

ಗುಡ್ಡಗಾಡು ಓಟದ ಸ್ಪರ್ಧೆ ಚಾಂಪಿಯನ್ 

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 13:20 IST
Last Updated 25 ಸೆಪ್ಟೆಂಬರ್ 2019, 13:20 IST
ಓಟದ ಸ್ವರ್ಧೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು
ಓಟದ ಸ್ವರ್ಧೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು   

ದೇವನಹಳ್ಳಿ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬುಧವಾರ ನಡೆದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಮಟ್ಟದ ಅಂತರಕಾಲೇಜು ಗುಡ್ಡಗಾಡು ಓಟದ ಸ್ವರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಕೋಲಾರ ಮಹಿಳಾ ಕಾಲೇಜು ತಂಡ ಮತ್ತು ಪುರುಷರ ವಿಭಾಗದಲ್ಲಿ ಎಸ್.ಕೆ.ವಿ.ಸಿ ದೈಹಿಕ ಶಿಕ್ಷಣ ಕಾಲೇಜು ತಂಡ ಚಾಂಪಿಯನ್ ಆಗಿ ಪ್ರಶಸ್ತಿ ಪಡೆದುಕೊಂಡವು.

10 ಕಿ.ಮೀ. ಓಟದ ಗುಡ್ಡಗಾಡು ಓಟದ ಸ್ವರ್ಧೆಯಲ್ಲಿ ಮಹಿಳೆಯರು ಮತ್ತು ಪುರುಷರ ತಂಡದಿಂದ ತಲಾ 6 ಸ್ಥಾನಗಳ ಆಯ್ಕೆಗೆ ಅವಕಾಶವಿದ್ದು ಸ್ಪರ್ಧೆಯ ಓಟದ ಸಮಯವನ್ನಾಧರಿಸಿ 1 ರಿಂದ 6 ಸ್ಥಾನಗಳ ಆಯ್ಕೆ ಅಂತಿಮಗೊಳಿಸಲಾಗಿದೆ ಎಂದು ಸಂಘಟಕರು ಮಾಹಿತಿ ನೀಡಿದರು.

ಓಟದ ಸ್ಪರ್ಧೆ ಹೆಸರು ಮತ್ತು ಓಟದ ಸಮಯ ನಿಮಿಷಗಳಲ್ಲಿ (ಮಹಿಳೆಯರ ವಿಭಾಗ): 1. ಕೆ.ಎಸ್. ಲಾವಣ್ಯ (42.58) 2. ಕೆ.ವಿ. ಲಕ್ಷ್ಮಿ (43.33) 3. ಆರ್.ದಿವ್ಯಾ (44.27) 4. ಅನುಷಾ (46.02) 5. ಎಂ.ಎಂ. ಸಂಗೀತಾ (46.06) 6. ಪೂರ್ವಿಕಾ (46.15).

ADVERTISEMENT

(ಪುರುಷರ ವಿಭಾಗ) 1. ಬಿ.ಶ್ರೀಕಾಂತ್ (29.42) 2. ಲಕ್ಷಣ್ (30.44) 3. ಟಿ.ಎಂ. ಜಗದೀಶ್ (32.03) 4. ಹರೀಶ್ ಕುಮಾರ್ (33.13) 5. ಬೊರೇಗೌಡ (35.55) 6. ನಿರಂಜನ್‌ಗೌಡ (36.01).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.