ಪ್ರಾತಿನಿಧಿಕ ಚಿತ್ರ
ದೇವನಹಳ್ಳಿ: ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಸಂವಿಧಾನ ವಿರೋಧಿ, ಸನಾತನಿ ವಕೀಲನ ಕೃತ್ಯ ಖಂಡಿಸಿ, ದಲಿತ ಸಂಘಟನೆಗಳು, ರೈತ - ಕಾರ್ಮಿಕ ಸಂಘಟನೆಗಳು, ಸಂವಿಧಾನ ಪರ, ಸಮಾನ ನಮಸ್ಕ ಸಂಘಟನೆಗಳು ಅ.10ರಂದು ಡಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಂಡಿವೆ.
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅವರಿಗೆ ಶೂ ಎಸೆಯುವ ಯತ್ನ ಕೃತ್ಯ ಬಾಬಾ ಸಾಹೇಬ ಡಾ.ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನಕ್ಕೆ ಮಾಡಿದ ಘೋರ ಅವಮಾನದಂತೆ. ಮನುವಾದಿ ವಕೀಲರ ವಿರುದ್ಧ ಕ್ರಮ ಕೈಗೊಂಡು ಕಠಿಣವಾದ ಶಿಕ್ಷೆಗೆ ಒಳಪಡಿಸಬೇಕೆಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಕಾರಹಳ್ಳಿಶ್ರೀನಿವಾಸ್ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ಅತ್ತಿಬೆಲೆ ಪಿ. ನರಸಪ್ಪ, ಬಹುಜನ ಸಮಾಜ ಪಾರ್ಟಿ, ರಾಜ್ಯ ಕಾರ್ಯದರ್ಶಿ ಎಚ್. ನರಸಿಂಹಯ್ಯ, ಜಿಲ್ಲಾಧ್ಯಕ್ಷ ಬಲರಾಮ್ ಚಂದ್ರು, ತಾಲ್ಲೂಕು ಅಧ್ಯಕ್ಷ ಮಲ್ಲೆಪುರ ರಾಮಾಂಜಿನಪ್ಪ, ಆಲ್ ಇಂಡಿಯಾ ಬಿ.ಎಸ್.ಪಿ ಅಧ್ಯಕ್ಷ ನಾಗರಾಜು, ಸೋಮಶೇಖರ್ ಮಹೇಶ್ ದಾಸ್, ವಿಜಯಪುರ ಶ್ರೀನಿವಾಸ್, ಕಗ್ಗಲಹಳ್ಳಿಜಯರಾಜ್, ಪಾಳ್ಯ ಮುನಿರಾಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.