ADVERTISEMENT

ಚುನಾವಣೆಗೆ ರೈತರ ಬೆವರಿನ ಶ್ರಮದ ಹಣ ಕೂಡದು 

​ಪ್ರಜಾವಾಣಿ ವಾರ್ತೆ
Published 27 ಜನವರಿ 2020, 13:25 IST
Last Updated 27 ಜನವರಿ 2020, 13:25 IST
ಅಭಿನಂದನೆ  ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಸೊಣ್ಣಪ್ಪ ಉಪಾಧ್ಯಕ್ಷೆ ಮಾಲ ಇದ್ದರು.
ಅಭಿನಂದನೆ  ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಸೊಣ್ಣಪ್ಪ ಉಪಾಧ್ಯಕ್ಷೆ ಮಾಲ ಇದ್ದರು.   

ದೇವನಹಳ್ಳಿ: ಸಹಕಾರ ಸಂಘಗಳ ಚುನಾವಣೆಗೆ ಅವಿರೋಧ ಆಯ್ಕೆ ನಡೆಸುವ ಮೂಲಕ ರೈತ ಬೆವರಿನ ಶ್ರಮದ ಹಣವನ್ನು ವ್ಯರ್ಥ ಮಾಡಲು ಅವಕಾಶ ಕೊಡಬಾರದು ಎಂದು ಸಹಕಾರ ಸಂಘದ ನಿರ್ದೇಶಕ ಕೆ.ರಮೇಶ್ ಸಹಕಾರ ಸಂಘಗಳಿಗೆ ಮನವಿ ಮಾಡಿದರು.

ಇಲ್ಲಿನ ಅರದೇಶನಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆಯ ನಂತರ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಹಕಾರ ಸಂಘದಲ್ಲಿನ ಸದಸ್ಯರು ಷೇರು ಶುಲ್ಕ ಪಾವತಿಸಿ ಸಾಲ ಪಡೆದು ಒಂದಿಷ್ಟು ಲಕ್ಷ ಸಾಲ ಪಡೆದು ಶ್ರಮವಹಿಸಿ ಬೆಳೆ ಉತ್ಪಾದನೆ ಮಾಡಿ ಇಂತಿಷ್ಟು ಬಡ್ಡಿ ಪಾವತಿ ಸಹಕಾರ ಸಂಘಕ್ಕೆ ಸಾಲ ಮತ್ತು ಬಡ್ಡಿ ತೀರುವಳಿ ಮಾಡುತ್ತಾರೆ. ಅವರು ನೀಡುವ ಬಡ್ಡಿಯಲ್ಲಿ ಸಹಕಾರ ಸಂಘದ ಆಡಳಿತ ನಡೆಯುತ್ತಿದೆ. ಸ್ಪಪ್ರತಿಷ್ಠೆಗಾಗಿ ಚುನಾವಣೆಯಾಗಲೇ ಬೇಕು ಎಂಬ ಹಠಮಾರಿತನ ಎಲ್ಲೆಡೆ ಕಂಡು ಬರುತ್ತಿದ್ದರೂ ಅನೇಕ ವರ್ಷಗಳಿಂದ ಇಲ್ಲಿನ ಸಹಕಾರ ಸಂಘ ಪಕ್ಷಾತೀತವಾಗಿ ಒಮ್ಮತದಿಂದ ನಿರ್ದೇಶಕರ ಆಯ್ಕೆಯ ನಂತರ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ ಮಾಡಲಾಗಿದೆ. ಇದು ಗ್ರಾಮಾಂತರ ಜಿಲ್ಲೆಗೆ ಮಾದರಿ ಆಗಬೇಕು’ ಎಂದು ಹೇಳಿದರು.

ADVERTISEMENT

ಅಭಿನಂದನೆ ಸ್ವಿಕರಿಸಿ ಮಾತನಾಡಿದ ಸಹಕಾರ ಸಂಘದ ನೂತನ ಅಧ್ಯಕ್ಷ ಎನ್.ಸೊಣ್ಣಪ್ಪ, ‘ಜಿಲ್ಲಾ ಸಹಕಾರ ಸಂಘದ ನಿರ್ದೇಶಕನಾಗಿ ಈ ಹಿಂದೆ ಐದು ವರ್ಷಗಳ ಆಡಳಿತಾವಧಿಯಲ್ಲಿ ನೂರಾರು ಕೋಟಿ ಜಿಲ್ಲೆ ಮತ್ತು ತಾಲ್ಲೂಕಿಗೆ ಒತ್ತಡ ಹಾಕಿ ಸಾಲ ಮಂಜೂರಾತಿ ಮಾಡಿಸಿದ್ದೇನೆ. ಅತಿ ಹೆಚ್ಚು ಸಾಲ ಕೊಡಿಸಿದ ಪರಿಣಾಮ ತಾಲ್ಲೂಕಿನಲ್ಲಿ ಸಿದ್ದರಾಮಯ್ಯ ಆಡಳಿತದಲ್ಲಿ 28 ಕೋಟಿ, ಸಮ್ಮಿಶ್ರ ಸರ್ಕಾರದಲ್ಲಿ ₹ 30 ಕೋಟಿ ಒಟ್ಟು 58 ಕೋಟಿ ಸಹಕಾರ ಸಂಘದಲ್ಲಿನ ರೈತ ಸಾಲ ಮನ್ನ ಆಗಿದೆ ಎಂದು ಹೇಳಿದರು.

ತಾಲ್ಲೂಕಿನ 11 ಸಹಕಾರ ಸಂಘಗಳಲ್ಲಿ ಇಡಿ ಜಿಲ್ಲೆಗೆ ಅತಿಹೆಚ್ಚು ಸಾಲ ನೀಡಲು ಜಿಲ್ಲಾ ಸಹಕಾರ ಬ್ಯಾಂಕ್‌ನಿಂದ ಒತ್ತಡ ಹಾಕಿ ತಂದಿದ್ದೇನೆ. ಬಯಲು ಸೀಮೆ ಪ್ರದೇಶದಲ್ಲಿ ಅಂತರ್ಜಲ ಕುಸಿತದ ನಡುವೆ ಶ್ರಮ ಜೀವಿ ರೈತರನ್ನು ಕಡೆಗಣಿಸುವಂತಿಲ್ಲ. ರೈತರು ಸಾಲ ನವೀಕರಣ ಮಾಡಿಸಿದ ತಕ್ಷಣ, ವಾರದಲ್ಲಿ ಸಾಲ ನೀಡಬೇಕು. 14 ಗ್ರಾಮಗಳ ವ್ಯಾಪ್ತಿಯಲ್ಲಿ 1,933 ಕುಟುಂಬಗಳಿವೆ, 3,470 ಹೆಕ್ಟೇರ್‌ನಲ್ಲಿ ರೈತರು ತಮ್ಮ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ದೇವನಹಳ್ಳಿ ಗ್ರಾಮಾಂತರ ಜಿಲ್ಲಾ ಕೇಂದ್ರವಾಗಿರುವುದರಿಂದ ರಿಯಲ್ ಎಸ್ಟೇಟ್ ಮಾಫಿಯಾ ಹೆಚ್ಚುತ್ತಿದೆ. ರೈತರು ಭವಿಷ್ಯದ ದೃಷ್ಠಿಯಿಂದ ತಮ್ಮ ಆಸ್ತಿ ಮಾರಾಟ ಮಾಡದೆ ತಮ್ಮ ಮಕ್ಕಳಿಗೆ ಉಳಿಸಬೇಕು’ ಎಂದು ಹೇಳಿದರು.

ತಾಲ್ಲೂಕು ವ್ಯವಸಾಯೋತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಂಡಿಬೆಲೆ ರಾಜಣ್ಣ ಮಾತನಾಡಿ, ‘ಸಹಕಾರ ಸಂಘದ ಪ್ರಗತಿ ಆಡಳಿತ ಮಂಡಳಿಯುವರ ಕಾರ್ಯವೈಖರಿ ಮೇಲೆ ಇರುತ್ತದೆ. ಇಲ್ಲಿನ ಸಹಕಾರ ಸಂಘ ಆರಂಭದಿಂದ ಈವರೆಗೆ ಚುನಾವಣೆ ನಡೆಸಿದೆ. ಒಮ್ಮತದಿಂದ ಆಯ್ಕೆ ಮಾಡಿಕೊಂಡು ಆಡಳಿತ ನಡೆಸುತ್ತಿರುವುದು ಜಿಲ್ಲೆಗೆ ಮಾದರಿ. ಸಹಕಾರ ಸಂಘದ ಈ ಹಿಂದಿನ ಅಧ್ಯಕ್ಷರ ನಿರ್ದೇಶಕ ಪಾರದರ್ಶಕ ಕಾರ್ಯವೈಖರಿ ಇತರೆ ಸಂಘಗಳಿಗೆ ಮಾದರಿ’ ಎಂದರು.

ಸಂಘದ ನೂತನ ಉಪಾಧ್ಯಕ್ಷೆ ಮಾಲಾ ಮಂಜುನಾಥ್, ನಿರ್ದೇಶಕರಾದ ಆರ್.ಮುರಳಿ, ಎಸ್.ರಾಜು, ವಿ.ರಾಜಣ್ಣ ಎನ್. ಹನುಮಂತೇಗೌಡ, ವಿ.ಮುನಿರಾಜ್, ಮುನಿಯಪ್ಪ, ಎಂ.ನಾರಾಯಣಪ್ಪ, ಆರ್.ಕವಿತ, ಆರ್.ಪ್ರವೀಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.