ADVERTISEMENT

ಕೀನ್ಯಾದ ಮಹಿಳೆ ಸಾಗಿಸುತ್ತಿದ್ದ ₹26 ಕೋಟಿ ಮೌಲ್ಯದ ಕೊಕೇನ್‌ ಜಪ್ತಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2024, 20:34 IST
Last Updated 20 ಜನವರಿ 2024, 20:34 IST
ಆರೋಪಿಯೂ ಸೂಟ್‌ಕೇಸ್‌ನಲ್ಲಿ ಇಟ್ಟಿದ್ದ ಕೊಕೇನ್‌ ಬಾಕ್ಸ್‌
ಆರೋಪಿಯೂ ಸೂಟ್‌ಕೇಸ್‌ನಲ್ಲಿ ಇಟ್ಟಿದ್ದ ಕೊಕೇನ್‌ ಬಾಕ್ಸ್‌   

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕೀನ್ಯಾದ ಮಹಿಳೆಯೊಬ್ಬಳು ದೆಹಲಿಗೆ ಸಾಗಿಸುತ್ತಿದ್ದ ₹26 ಕೋಟಿ ಮೌಲ್ಯದ 2.56 ಕೆ.ಜಿ ಕೊಕೇನ್‌ ಮಾದಕ ವಸ್ತುವನ್ನು ವೈಮಾನಿಕ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಳ್ಳ ಸಾಗಣೆ ಮಾಡುತ್ತಿದ್ದ ಕೀನ್ಯಾದ ಮಹಿಳೆಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.

ಜ.15ರಂದು ಅಪಾರ ‍ಪ್ರಮಾಣದ ಮಾದಕ ವಸ್ತು ಕಳ್ಳ ಸಾಗಣೆ ಮಾಡುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಸುಳಿವು ದೊರೆತಿತ್ತು. ದೆಹಲಿಗೆ ತೆರಳುತ್ತಿದ್ದ ಪ್ರಯಾಣಿಕರನ್ನು ಪರಿಶೀಲಿಸಿದಾಗ ಮಹಿಳೆ ಸೂಟ್‌ಕೇಸ್‌ ಕೆಳಗೆ ಡಬ್ಬದಲ್ಲಿ 2.56 ಕೆ.ಜಿ ಕೊಕೇನ್‌ ಅಡಗಿಸಿ ಇಟ್ಟಿದ್ದಳು. ಮಹಿಳೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT