
ವಿಜಯಪುರ (ದೇವನಹಳ್ಳಿ): ಇಲ್ಲಿನ ಯಲಿಯೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಕ್ರಮವಾಗಿ ವೈ.ಎಸ್. ಪ್ರಕಾಶ್, ಲಕ್ಷ್ಮಮ್ಮ ಅವಿರೋಧವಾಗಿ ಆಯ್ಕೆಯಾದರು.
ನಿರ್ದೇಶಕರಾಗಿ ಎಸ್.ಎಂ.ರಘುವೀರ್, ವೈ.ಎಂ.ಮುನಿರಾಜು, ವೈ.ಎಂ. ರಾಮಾಂಜಿನಯ್ಯ, ಡಿ. ಬಸವರಾಜ, ಸಂಪಂಗಿರಾಮಯ್ಯ, ಎಚ್. ಆನಂದಗೌಡ, ಸವಿತಾ, ಮುನಿರಾಜು, ಬೈರಪ್ಪ, ಅನುಪಮ ಆಯ್ಕೆಯಾಗಿದ್ದಾರೆ. ಸರ್ಕಾರಿ ನಾಮಿನಿ ವೈ.ವಿ.ನಾರಾಯಣಸ್ವಾಮಿ ಹಾಗೂ ಮುಖ್ಯ ಕಾರ್ಯನಿವಾಹಕರಾಗಿ ವೈ.ಎಸ್.ಕೇಶವ ಆಯ್ಕೆಗೊಂಡಿದ್ದಾರೆ.
ಯಲಿಯೂರು ಹಾಲು ಉತ್ಪಾದಕರ ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು. ಹಾಲು ಉತ್ಪಾದನೆಗೆ ಬರುವ ಸವಲತ್ತುಗಳನ್ನು ಸಮರ್ಪಕವಾಗಿ ಹಾಲು ಉತ್ಪಾದಕರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ಸಂಘದ ನೂತನ ಅಧ್ಯಕ್ಷ ಎಸ್.ಎಂ.ರಘುವೀರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.