ಹೊಸಕೋಟೆ: ಸ್ವಾತಂತ್ರ್ಯ ಬಂದು 80 ವರ್ಷ ಸಮೀಪಿಸುತ್ತಿದೆ. ಇಂದಿಗೂ ಒಂದಲ್ಲ ಒಂದು ರೀತಿಯಲ್ಲಿ ದಲಿತ ಸಮುದಾಯದ ಶೋಷಣೆ ನಡೆಯುತ್ತಲೇ ಇದೆ. ಇಂದಿಗೂ ದಲಿತರು ಬೀದಿ ಹೋರಾಟಗಳಲ್ಲೇ ಕಾಲ ಕಳೆಯುತ್ತಿರುವುರುದು ಒಳ್ಳೆಯ ಬೆಳೆವಣಿಗೆಯಲ್ಲ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವಿ ಎಚ್.ಲಕ್ಷ್ಮಿನಾರಾಯಣಸ್ವಾಮಿ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದಲಿತ ಸೇನೆ ಸಂಘಟನೆಯಿಂದ ಭಾನುವಾರ ಹಮ್ಮಿಕೊಂಡಿದ್ದ ದಲಿತ ಸೇನೆ ಸಂಘಟನೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ಹೊಸಕೋಟೆ ತಾಲ್ಲೂಕು ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳು ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ದಲಿತ, ಶೋಷಿತರ ಏಳಿಗೆಗಾಗಿ ದುಡಿದ ಡಾ.ಬಿ.ಆರ್.ಅಂಬೇಡ್ಕರ್, ಬಾಬೂ ಜಗಜೀವನ್‌ರಾಮ್ ಸೇರಿದಂತೆ ಹಲವರ ಕನಸು ಇದೇ ಆಗಿತ್ತು. ಇದನ್ನು ಪೂರೈಸಲು ಇಂದು ನಾವು ಸಜ್ಜುಗೊಳ್ಳಬೇಕಿದೆ ಆ ನಿಟ್ಟಿನಲ್ಲಿ ನಾವು ಹೊಸ ಚಿಂತನೆಗಳನ್ನು ನಮ್ಮ ಸಮುದಾಯದಲ್ಲಿ ಬಿತ್ತಬೇಕಿದೆ. ದಲಿತ ಸೇನೆ ಈ ಕೆಲಸವನ್ನು ಮಾಡಲಿ ಎಂದು ಆಶಿಸಿದರು.
ಸಮಾಜದಲ್ಲಿ ಆಗುತ್ತಿರುವ ಅನ್ಯಾಯಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟಿತ ಹೋರಾಟ ರೂಪಿಸಬೇಕು. ಇದಕ್ಕೆ ಶಿಕ್ಷಣವೇ ಪ್ರಮುಖ ಅಸ್ತ್ರ. ಶಿಕ್ಷಣದ ಮೂಲಕ ಅಧಿಕಾರ ಕೇಂದ್ರಗಳಲ್ಲಿ ತಮ್ಮ ಹಕ್ಕು ಪಡೆದುಕೊಳ್ಳಬೇಕು. ಆಗ ಮಾತ್ರ ದಲಿತ ಸಮುದಾಯ ಉದ್ದಾರ ಆಗಲು ಸಾಧ್ಯ. ಇಲ್ಲದಿದ್ದರೆ ದಲಿತರು ಬೀದಿ ಹೋರಾಟಗಳಲ್ಲೇ ಇರಬೇಕಾಗುತ್ತದೆ. ಶೋಷಕರು ಅಧಿಕಾರದಲ್ಲಿ ಇರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದಲಿತ ಸೇನೆಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳ ನೂತನ ಪದಾಧಿಕಾರಿಗಳು ಅಧಿಕಾರವನ್ನು ವಹಿಸಿಕೊಂಡರು.
ರ್ಯಕ್ರಮದಲ್ಲಿ ದಲಿತ ಸೇನೆ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಬೀಡಾ ಶ್ರೀನಿವಾಸ್, ಉಪಾಧ್ಯಕ್ಷ ಮೆಹಬೂಬ್ ಸಿಂದಗಿಕರ್, ರಾಜ್ಯ ಯುವ ಘಟಕದ ಅಧ್ಯಕ್ಷ ಖಾಲಿದ್ ಖಾನ್, ಕಾರ್ಮಿಕ ಘಟಕದ ಅಧ್ಯಕ್ಷ ಗೊಟ್ಟಿಪುರ ಚಂದ್ರಶೇಖರ್, ಜಿಲ್ಲಾಧ್ಯಕ್ಷ ಜಗನ್ನಾಥ್ ಗಾಯಕ್‌ವಾಡ್, ಗೌರವಾಧ್ಯಕ್ಷ ರವಿ, ತಾಲ್ಲೂಕು ಗೌರವಾಧ್ಯಕ್ಷ ತಮ್ಮಯ್ಯ, ತಾಲ್ಲೂಕು ಅಧ್ಯಕ್ಷ ಪೂಜೇನ ಅಗ್ರಹಾರದ ಮುನಿನರಸಿಂಹ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.