ADVERTISEMENT

ಹೊಸಕೋಟೆ: ನಟ ದರ್ಶನ್ ಬಿಡುಗಡೆಗೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 21:16 IST
Last Updated 14 ಸೆಪ್ಟೆಂಬರ್ 2024, 21:16 IST
   

ಹೊಸಕೋಟೆ: ವಾರ್ಡ್ ನಂ.7ರ ಸಿದ್ದಾರ್ಥ ನಗರದಲ್ಲಿ ಅಖಿರಥ ಗೆಳೆಯರ ಬಳಗವು ‘ನಮ್ಮ ಹೊಸಕೋಟೆ ರಾಜ’ ಎಂಬ ಶೀರ್ಷಿಕೆಯಡಿ ಎತ್ತರದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು.

ನಟ ದರ್ಶನ್ ಅವರು ಆರೋಪ ಮುಕ್ತರಾಗಿ ಶೀಘ್ರವಾಗಿ ಬಿಡುಗಡೆಯಾಗಲಿ ಎಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಗೌರಿ ಮೂರ್ತಿಯ ಕೆಳಭಾಗದಲ್ಲಿ ದರ್ಶನ್ ಭಾವಚಿತ್ರವಿಟ್ಟು ಪಲ್ಲಕ್ಕಿ ಮೆರವಣಿಗೆ ಮಾಡಲಾಯಿತು.

21 ಎತ್ತರದ ಗಣೇಶ ಮೂರ್ತಿಯನ್ನು ಮುಂಬೈನ ನುರಿತ ಕಲಾವಿದರಿಂದ ಆರು ತಿಂಗಳ ಕಾಲ ನಿರ್ಮಿಸಿ ಮೂರು ದಿನಗಳ ಕಾಲ ಟ್ರಕ್ ಮೂಲಕ ಸಾಗಾಟ ಮಾಡಿ ಇಲ್ಲಿಗೆ ತರಲಾದೆ. ಹಬ್ಬದ ಪ್ರಯುಕ್ತ ಏಳು ದಿನಗಳ ಕಾಲ ಪ್ರತಿ ನಿತ್ಯ ಒಂದೊಂದು ವಿಭಿನ್ನ ರೀತಿಯಲ್ಲಿ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಹಬ್ಬವನ್ನು ಆಚರಣೆ ಮಾಡಲಾಯಿತು. ಏಳು ದಿನಗಳ ನಂತರ ಕರ್ನಾಟಕದ 30 ಜನರ ರಣವಾದ್ಯ, ಕೇರಳದ ಚಂಡೆವಾದ್ಯ, ತಮಿಳುನಾಡಿನ ಥೈಯಂ ಕುಣಿತಗಳೊಂದಿಗೆ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ADVERTISEMENT

ಕಾರ್ಯಕ್ರಮದ ವ್ಯವಸ್ಥಾಪಕ ಎಸ್.ಎಂ.ನರಸಿಂಹ ಮೂರ್ತಿ, ನಂದೀಶ್, ಅಜಯ್, ವಿಕಾಸ್, ಗಣೇಶ್ ಸೇರಿದಂತೆ ಅಖಿರಥ ಗೆಳೆಯರ ಬಳಗ ನಮ್ಮ ಹೊಸಕೋಟೆ ರಾಜಾ ತಂಡದ ಸದಸ್ಯರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.