ADVERTISEMENT

ಕೆಂಪೇಗೌಡರ ಜನ್ಮಸ್ಥಳ ಅಭಿವೃದ್ಧಿ: ಡಿ.ಸಿ ಸಭೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 3:01 IST
Last Updated 14 ಜುಲೈ 2025, 3:01 IST
ನಾಡಪ್ರಭು ಕೆಂಪೇಗೌಡರ ಜನ್ಮಸ್ಥಳ ಅಭಿವೃದ್ಧಿಗೆ ಜಾಗ ಗುರುತಿಸುವ ಸಲುವಾಗಿ ಭಾನುವಾರ ದೇವನಹಳ್ಳಿ ತಾಲ್ಲೂಕು ಆವತಿ ಗ್ರಾಮದ ಚನ್ನಕೇಶವ ದೇವಾಲಯದ ಆವರಣದಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ನೇತೃತ್ವದಲ್ಲಿ ಸಭೆ ನಡೆಯಿತು.
ನಾಡಪ್ರಭು ಕೆಂಪೇಗೌಡರ ಜನ್ಮಸ್ಥಳ ಅಭಿವೃದ್ಧಿಗೆ ಜಾಗ ಗುರುತಿಸುವ ಸಲುವಾಗಿ ಭಾನುವಾರ ದೇವನಹಳ್ಳಿ ತಾಲ್ಲೂಕು ಆವತಿ ಗ್ರಾಮದ ಚನ್ನಕೇಶವ ದೇವಾಲಯದ ಆವರಣದಲ್ಲಿ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ನೇತೃತ್ವದಲ್ಲಿ ಸಭೆ ನಡೆಯಿತು.   

ದೇವನಹಳ್ಳಿ: ಆವತಿ ಗ್ರಾಮದ ಚನ್ನಕೇಶವ ದೇವಾಲಯದಲ್ಲಿ ನಾಡಪ್ರಭು ಕೆಂಪೇಗೌಡರ ಜನ್ಮಸ್ಥಳ ಅಭಿವೃದ್ಧಿಗೆ ಸ್ಥಳೀಯವಾಗಿ ಗುರುತಿಸಿರುವ 9.10 ಎಕರೆ ಜಮೀನಿಗೆ ದಾರಿ ಸಮಸ್ಯೆ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗ್ರಾಮಸ್ಥರು ಸಲಹೆ, ಸೂಚನೆ ನೀಡಿದರು.

ಆವತಿ ಚನ್ನಕೇಶವ ದೇವಾಲಯ ಆವರಣದಲ್ಲಿ ಜಿಲ್ಲಾಡಳಿತದ ಸಭೆಯಲ್ಲಿ ಜಿಲ್ಲಾಧಿಕಾರಿ ಬಸವರಾಜ್‌.ಎ.ಬಿ ಮಾತನಾಡಿ, ಈ ಗ್ರಾಮದಲ್ಲೇ ಅಥವಾ ಅಕ್ಕಪಕ್ಕದ ಗ್ರಾಮದಲ್ಲಿ ಒಂದು ಎಕರೆ ಜಾಗ ಗುರುತಿಸಿ, ಕೆಂಪೇಗೌಡರ ತಾಣ ಅಭಿವೃದ್ಧಿಪಡಿಸಲು ಜನರ ಸಲಹೆ ಮತ್ತು ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಹೇಳಿದರು.

ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಆರ್.ಕೆ. ನಂಜೇಗೌಡ, ದೇವನಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಬೈರೇಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ವಿ. ನಾರಾಯಣಸ್ವಾಮಿ, ಅನಂತ ವಿದ್ಯಾನಿಕೇತನ ಶಾಲೆಯ ಕಾರ್ಯದರ್ಶಿ ಕೆಂಪೇಗೌಡ, ಮಹಿಳಾ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷೆ ರಾಧಾಕೃಷ್ಣ ರೆಡ್ಡಿ, ಬಿ.ಮುನೇಗೌಡ, ಅತ್ತಿಬೆಲೆ ನರಸಪ್ಪ, ಗೋಪಾಲಕೃಷ್ಣ, ಸಿ.ಪ್ರಸನ್ನ ಕುಮಾರ್, ನಾಗೇಗೌಡ, ವೆಂಕಟೇಶ್, ಜೊನ್ನಹಳ್ಳಿ ಮುನ್ರಾಜ್, ನೆರಗನಹಳ್ಳಿ ಶ್ರೀನಿವಾಸ್, ಅರುವನಹಳ್ಳಿ ವೆಂಕಟೇಗೌಡ, ಬಸವರಾಜು, ಸೇರಿದಂತೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರು.

ADVERTISEMENT

ಆವತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿರತ್ನಮ್ಮ, ತಹಶೀಲ್ದಾರ್ ಜಯಕುಮಾರ್, ತಾಲ್ಲೂಕು ಪಂಚಾಯಿತಿ ಇ.ಓ ಶ್ರೀನಾಥಗೌಡ, ರಾಜ್ಯಸ್ವ ನಿರೀಕ್ಷಕ ಹನುಮಂತರಾಯಪ್ಪ, ಕಂದಾಯ ಇಲಾಖೆ ಸಿಬ್ಬಂದಿ, ಗ್ರಾಮ ಪಂಚಾಯಿತಿ ಪಿಡಿಒ ಇಸಾಕ್, ಕಾರ್ಯದರ್ಶಿ ರಾಘವೇಂದ್ರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.