ADVERTISEMENT

ದೇವನಹಳ್ಳಿ: ಜೇನು ಸಾಕಾಣಿಕೆ ತರಬೇತಿಗೆ ಅರ್ಜಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 8:12 IST
Last Updated 22 ಅಕ್ಟೋಬರ್ 2025, 8:12 IST
<div class="paragraphs"><p>ಜೇನು ಸಾಕಾಣಿಕೆ&nbsp;</p></div>

ಜೇನು ಸಾಕಾಣಿಕೆ 

   

ದೇವನಹಳ್ಳಿ: ತೋಟಗಾರಿಕೆ ಇಲಾಖೆ‌ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡಗು ಜಿಲ್ಲೆ ಭಾಗಮಂಡಲ ಜೇನುಗಾರಿಕೆ ತರಬೇತಿ ಕೇಂದ್ರದಿಂದ ಪ್ರಸಕ್ತ ಸಾಲಿನ ಮೂರು ತಿಂಗಳ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ.

ಅರ್ಜಿಯನ್ನು ಜಿಲ್ಲಾ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು, ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಅಥವಾ ಇಲಾಖೆ ಅಧಿಕೃತ ಜಾಲತಾಣ https://horticulturedir.karnataka.gov.in ಇದರಲ್ಲಿ ಅಕ್ಟೋಬರ್ 27ರವರೆಗೆ ಡೌನ್ ಲೋಡ್ ಮಾಡಿಕೊಳ್ಳಬಹುದು.

ADVERTISEMENT

ಜೇನುಗಾರಿಕೆ ತರಬೇತಿಗೆ ಕನಿಷ್ಠ ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಿರಬೇಕು. ಅಭ್ಯರ್ಥಿ ಅಥವಾ ಅವರ ಪೋಷಕರು ಜಮೀನು ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿದ್ದು, ಪಹಣಿ ಹೊಂದಿರಬೇಕು. ಅರ್ಜಿದಾರರು ವಯೋಮಿತಿ 18-35 ವರ್ಷವಾಗಿರಬೇಕು. ಅರ್ಜಿಯನ್ನು ಸಲ್ಲಿಸಲು ಅಕ್ಟೋಬರ್ 31 ಕೊನೆ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಜಂಟಿ ನಿರ್ದೇಶಕರು ಅಥವಾ ಹಿರಿಯ ಸಹಾಯಕ ನಿರ್ದೇಶಕರು ದೂ.ಸಂಖ್ಯೆ:8660409618, ಹಿರಿಯ ಸಹಾಯಕ ನಿರ್ದೇಶಕರು ದೇವನಹಳ್ಳಿ ತಾಲ್ಲೂಕು 9480461234, ದೊಡ್ಡಬಳ್ಳಾಪುರ ತಾಲ್ಲೂಕು 9482129648, ಹೊಸಕೋಟೆ ತಾಲ್ಲೂಕು 9880210892, ನೆಲಮಂಗಲ ತಾಲ್ಲೂಕು 98804461607 ಗೆ ಸಂಪರ್ಕಸಬಹುದು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.