ಚನ್ನರಾಯಪಟ್ಟಣ (ದೇವನಹಳ್ಳಿ): ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಯಲಿಯೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಬಿದಿದ್ದ ರಾಶಿ ಕಸವನ್ನು ಯಲಿಯೂರು ಗ್ರಾಮ ಪಂಚಾಯಿತಿ ಸಿಬ್ಬಂದಿ ಭಾನುವಾರ ಮುಂಜಾನೆ ತೆರವುಗೊಳಿಸಿದರು.
ಜ.19 ರಂದು ‘ಯಲಿಯೂರು ರಸ್ತೆ ಬದಿ ಕಸ’ ಎಂಬ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ಸುದ್ದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು, ಕಸ ವಿಲೇವಾರಿ ಕಾರ್ಯವೂ ಸಮರೋಪಾದಿಯಲ್ಲಿ ಭಾನುವಾರ ಮುಂಜಾನೆಯಲ್ಲಿಯೇ ಆರಂಭಿಸಿದ್ದಾರೆ.
ಯಲಿಯೂರು ಪಂಚಾಯಿತಿಯ ಕಸ ವಿಲೇವಾರಿ ಸಿಬ್ಬಂದಿ ವಾಹನದೊಂದಿಗೆ ಆಗಮಿಸಿ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಬಿದಿದ್ದ ಕಸವನ್ನು ವಿಲೇವಾರಿ ಮಾಡಿದ್ದಾರೆ. ಸಾರ್ವಜನಿಕರು ಕಸ ಸಂಗ್ರಹ ವಾಹಕ್ಕೆ ಕಸವನ್ನು ನೀಡಬೇಕು ರಸ್ತೆಯ ಬದಿಗಳಲ್ಲಿ ಕಸವನ್ನು ತಂದು ಸುರಿಯಬಾರದು ಎಂದು ಮನವಿ ಮಾಡಿದ್ದಾರೆ.
ನಿಯಮಮೀರಿ ಕಸವನ್ನು ರಸ್ತೆಯ ಇಕ್ಕೆಲ್ಲಗಳನ್ನು ಹಾಕುವವರಿಗೆ ಕಾನೂನಾತ್ಮಕವಾಗಿ ದಂಡ ವಿಧಿಸಲಾಗುತ್ತದೆ ಎಂದು ಯಲಿಯೂರು ಪಂಚಾಯಿತಿ ಎಚ್ಚರಿಕೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.