ದೇವನಹಳ್ಳಿ: ಬಿಜೆಪಿ ಅಧಿಕಾರ ಅಥವಾ ಚುನಾವಣೆಗಾಗಿ ದುಡಿಯುವ ಪಕ್ಷ ವಲ್ಲ. ಜನಸಾಮಾನ್ಯರ ಏಳಿಗೆಗೆ ಹಾಗೂ ರಾಷ್ಟ್ರದ ಹಿತಕ್ಕಾಗಿ ದುಡಿಯುತ್ತಿರುವ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿಕುಮಾರ್ ತಿಳಿಸಿದರು.
ಪಟ್ಟಣದ ದೇವನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಅಂಗವಾಗಿ ಶನಿವಾರ ಸೇವಾ ಪಾಕ್ಷಿಕದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಧಾನಿಗಳ ಹುಟ್ಟುಹಬ್ಬದ ಪ್ರಯುಕ್ತ ದೇಶಾದ್ಯಂತ ಸೇವಾ ಪಾಕ್ಷಿಕ ಅಭಿಯಾನ ಹಮ್ಮಿಕೊಂಡಿದ್ದೇವೆ. ಅದರಂತೆ ಮಹಿಳಾ ಮೋರ್ಚಾದ ಪದಾಧಿಕಾರಿಗಳು ರೈಲ್ವೆ ನಿಲ್ದಾಣವನ್ನು ಸ್ವಚ್ಛಗೊಳ್ಳಿಸುವ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ ಎಂದರು.
ಮಹಿಳಾ ಮೋರ್ಚಾದ ಪುನೀತಾ, ಪಂಡಿತ್ ದೀನ್ ದಯಾಳ್ ಅವರ ಹುಟ್ಟು ಹಬ್ಬ ಸೆ.2 ಅದರಂತೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹುಟ್ಟು ಹಬ್ಬವೂ ಅ.2ರಂದು ಆಚರಣೆ ಮಾಡುವುದರಿಂದ ಈ ಒಂದು ತಿಂಗಳು ವಿವಿಧ ಸೇವಾ ಕಾರ್ಯಕ್ರಮಗಳನ್ನು ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಪ್ರತಿಯೊಬ್ಬರು ವಾತಾವರಣ, ಸಾರ್ವಜನಿಕ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಎಲ್ಲವನ್ನೂ ಸ್ಥಳೀಯ ಪುರಸಭೆಯೇ ಮಾಡುತ್ತದೆ ಎಂದು ಕೈಕಟ್ಟಿ ನೋಡದೇ, ಜವಾಬ್ದಾರಿ ನಾಗರಿಕರಾಗಿ ಸಮಾಜ ಸೇವೆಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡಬೇಕು ಎಂದರು.
ಬಿಜೆಪಿ ಮುಖಂಡರಾದ ಸುಬ್ರಹ್ಮಣ್ಯ, ಸುರೇಶ್ ಆಚಾರ್ಯ, ಶಿವಣ್ಣ, ಶಾಮಣ್ಣ, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿಗಳದ ನಾಗವೇಣಿ , ಮಹಿಳಾ ಮೋರ್ಚದ ಮಂಡಲ ಅಧ್ಯಕ್ಷರಾದ ವಿಮಲಾ ಶಿವಕುಮಾರ್, ಪ್ರಮುಖರಾದ ಭಾಗ್ಯಮ್ಮ, ರಜನಿ, ಪ್ರೇಮ, ಸುಲೋಚನಾ, ಸುನಂದ, ವಸಂತ, ವೀಣಾ, ಶಿವಕುಮಾರ್, ನಾಗರತ್ನ ಸೇರಿದಂತೆ ಕಾರ್ಯಕರ್ತರು ಸ್ವಚ್ಛತೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.