ADVERTISEMENT

ದೇವನಹಳ್ಳಿ: ನೀಲಗಿರೀಶ್ವರ ಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವ ‘ನೀಲವೈಭವ’

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 2:38 IST
Last Updated 27 ಜನವರಿ 2026, 2:38 IST
ಗುರಪ್ಪನಮಠ ನೀಲಗಿರೀಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ನೀಲ ವೈಭವ ಕಾರ್ಯಕ್ರಮದಲ್ಲಿ ಐಎಫ್‌ಎಸ್ ಅಧಿಕಾರಿ ನರೇಂದ್ರಬಾಬು, ಮಳ್ಳೂರು ಶಿವಣ್ಣ ಅವರನ್ನು ಸನ್ಮಾನಿಸಲಾಯಿತು
ಗುರಪ್ಪನಮಠ ನೀಲಗಿರೀಶ್ವರ ವಿದ್ಯಾನಿಕೇತನ ಶಾಲೆಯಲ್ಲಿ ನಡೆದ ನೀಲ ವೈಭವ ಕಾರ್ಯಕ್ರಮದಲ್ಲಿ ಐಎಫ್‌ಎಸ್ ಅಧಿಕಾರಿ ನರೇಂದ್ರಬಾಬು, ಮಳ್ಳೂರು ಶಿವಣ್ಣ ಅವರನ್ನು ಸನ್ಮಾನಿಸಲಾಯಿತು   

ವಿಜಯಪುರ (ದೇವನಹಳ್ಳಿ): ವಿದ್ಯೆಯಿಂದ ಮಾತ್ರ ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಉತ್ತಮವಾಗಿರಿಸಿಕೊಳ್ಳಲು ಸಾಧ್ಯ ಎಂದು ಎಂದು ಭಾರತೀಯ ಸಿಲ್ಕ್ ಮಾರ್ಕ್ ಸಂಸ್ಥೆ, ಕೇಂದ್ರೀಯ ರೇಷ್ಮೆ ಮಂಡಳಿಯ ಜಂಟಿ ಕಾರ್ಯದರ್ಶಿ ನರೇಂದ್ರಬಾಬು ತಿಳಿಸಿದರು.

ಗುರಪ್ಪನಮಠದ ನೀಲಗಿರೀಶ್ವರ ಶಾಲೆಯಲ್ಲಿ ಆಯೋಜಿಸಿದ್ದ 14ನೇ ವರ್ಷದ ಶಾಲಾ ವಾರ್ಷಿಕೋತ್ಸವ ನೀಲವೈಭವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಹುಟ್ಟಿದ ವಿಶ್ವೇಶ್ವರಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸೇರಿದಂತೆ ಶಿವಾಜಿ ಮಹಾರಾಜರು, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತಹ ಮಹನೀಯರ ಸಾಧನೆಗಳ ಹಿಂದೆ ಅವರ ತಾಯಂದಿರ ಪ್ರೋತ್ಸಾಹವಿರುವುದನ್ನು ನೋಡುತ್ತೇವೆ ಎಂದು ನೀಲಗಿರೀಶ್ವರ ವಿದ್ಯಾನಿಕೇತನ ಶಾಲೆಯ ಅಧ್ಯಕ್ಷ ಎಂ.ವೀರಣ್ಣ ಹೇಳಿದರು.

ADVERTISEMENT

ಶಾಲೆಯ ಕಾರ್ಯದರ್ಶಿ ಸಿ.ನಾರಾಯಣಸ್ವಾಮಿ, ವಿದ್ಯಾರ್ಥಿನಿ ಸಿ.ಭಾವನಾ ಮಾತನಾಡಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಕೇಂದ್ರ ರೇಷ್ಮೆ ಮಂಡಳಿ ನಿರ್ದೆಶಕ ಮಳ್ಳೂರು ಶಿವಣ್ಣ, ಎ.ವಿ.ಎಂ.ನಾಗರಾಜ್, ನಿವಿ.ಎಂ.ನಾಗರಾಜ್, ಕೇಶವಪ್ಪ, ವೆಂಕಟೇಶ್, ಎನ್.ತೋಟದಪ್ಪ, ಎನ್.ಗೋಪಾಲ್, ಸೋಮಶಂಕರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.