ADVERTISEMENT

ದೊಡ್ಡಬಳ್ಳಾಪುರ: ದೇವಾಂಗ ಮಂಡಲಿ ಅಧ್ಯಕ್ಷರಾಗಿ ಎಂ.ಜಿ.ಶ್ರೀನಿವಾಸ್‌ ಆಯ್ಕೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 2:08 IST
Last Updated 9 ಸೆಪ್ಟೆಂಬರ್ 2025, 2:08 IST
ಎಂ.ಜಿ. ಶ್ರೀನಿವಾಸ್‌
ಎಂ.ಜಿ. ಶ್ರೀನಿವಾಸ್‌   

ದೊಡ್ಡಬಳ್ಳಾಪುರ: ಇಲ್ಲಿನ ದೇವಾಂಗ ಮಂಡಲಿಯ 2025-28 ನೇ ಸಾಲಿಗೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆಗಾಗಿ ಭಾನುವಾರ ನಡೆದ ಚುನಾವಣೆಯಲ್ಲಿ ದೇವಾಂಗ ಮಂಡಲಿ ಅಧ್ಯಕ್ಷರಾಗಿ ಎಂ.ಜಿ.ಶ್ರೀನಿವಾಸ್‌ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಬಿ.ಜಿ.ಅಮರನಾಥ್, ಎನ್‌.ಎಸ್‌.ಚಿಕ್ಕಣ್ಣ, ಗೌರವ ಕಾರ್ಯದರ್ಶಿಯಾಗಿ ಎಂ.ಜಿ.ಅಮರನಾಥ್,ಸಹ ಕಾರ್ಯದರ್ಶಿಯಾಗಿ ಎ.ನಟರಾಜ್, ಖಜಾಂಚಿಯಾಗಿ ಎಚ್‌.ವಿ.ಅಖಿಲೇಶ್‌ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ಕೆ.ಎಸ್‌.ಮಂಜುನಾಥ, ಎಲ್‌.ಮಹೇಶ, ಎಸ್‌.ವತ್ಸಲಾ, ಎನ್. ಜಿ.ಕುಮಾರ್, ಕೆ.ಎನ್‌.ಜನಾರ್ಧನ, ವಿ.ಎಸ್‌.ರಾಘವೇಂದ್ರ,ಪ್ರಭಾಕರ್,ಕೆ.ಎಸ್‌.ನರೇಂದ್ರ,ಎಸ್‌.ಎನ್‌.ನಟರಾಜ,ಡಿ.ಎ.ಲಕ್ಷ್ಮೀಕಾಂತ,ವಿ.ನಿರ್ಮಲ, ಬಿ.ಪಿ.ಪ್ರಿಯಾಂಕ, ಪಿ.ಎಚ್‌.ಗೋಪಾಲಕೃಷ್ಣ, ಜಿ.ಸಿ.ಶಿವಕುಮಾರ್‌ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿ.ಶಿವಕುಮಾರ್‌ ತಿಳಿಸಿದ್ದಾರೆ.

ADVERTISEMENT

ಹಾಲಿ ಅಧ್ಯಕ್ಷರಾಗಿದ್ದ ಎಂ.ಜಿ. ಶ್ರೀನಿವಾಸ್‌ ಪುನರ್‌ ಆಯ್ಕೆಯಾಗಿದ್ದಾರೆ. ಎಂ.ಜಿ. ಶ್ರೀನಿವಾಸ್‌ ಹಾಗೂ ಕೆ.ಜಿ ದಿನೇಶ್‌-ಎನ್‌.ಎಸ್‌.ಚಿಕ್ಕಣ್ಣ ಎರಡು ತಂಡಗಳ ನಡುವೆ ಚುನಾವಣೆ ಹಣಾ ಹಣಿ ನಡೆದಿದ್ದು, ಒಟ್ಟು 20 ಸ್ಥಾನಗಳಲ್ಲಿ ಎಂ.ಜಿ. ಶ್ರೀನಿವಾಸ್‌ ತಂಡದಿಂದ 16 ಸ್ಥಾನ ಹಾಗೂ ಕೆ.ಜಿ ದಿನೇಶ್‌-ಎನ್‌.ಎಸ್‌.ಚಿಕ್ಕಣ್ಣ ನೇತೃತ್ವದ ತಂಡ 4 ಸ್ಥಾನ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.