ರಾಮನಗರ: ‘ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯವರು ಮಗು ಚಿವುಟಿ, ತೊಟ್ಟಿಲು ತೂಗುವ ಕೆಲಸ ಮಾಡುತ್ತಿದ್ದಾರೆ. ಎಸ್‌ಐಟಿ ತನಿಖೆ ಬಳಿಕ ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಿರಾಳರಾಗಿದ್ದಾರೆ. ಆದರೆ, ಬಿಜೆಪಿ–ಜೆಡಿಎಸ್‌ನವರು ಧರ್ಮಸ್ಥಳ ಯಾತ್ರೆ ಹೆಸರಿನಲ್ಲಿ ನಾಟಕವಾಡುತ್ತಿದ್ದಾರೆ. ಇವರೆಲ್ಲಾ ಡ್ರಾಮಾ ಕಂಪನಿಯ ಡ್ರಾಮಾ ಮಾಸ್ಟರ್‌ಗಳು. ಎಸ್‌ಐಟಿ ರಚಿಸದೇ ಇದ್ದಿದ್ದರೆ ಧರ್ಮಾಧಿಕಾರಿ ಕುಟುಂಬ ನಿತ್ಯ ನೋವು ಅನುಭವಿಸುತ್ತಿತ್ತು. ತನಿಖೆಯಿಂದ ಸತ್ಯಾಂಶ ಹೊರತಂದಿದ್ದು ನಮ್ಮ ಸರ್ಕಾರ. ಆ ಶ್ರೇಯಸ್ಸು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಹೋಗುತ್ತದೆ ಎಂದು, ಎಸ್‌ಐಟಿ ವರದಿಗೂ ಮುಂಚೆಯೇ ಬಿಜೆಪಿ–ಜೆಡಿಎಸ್‌ನವರು ಧರ್ಮಸ್ಥಳಕ್ಕೆ ಓಡಿ ಹೋಗಿದ್ದಾರೆ’ ಎಂದು ಬಾಲಕೃಷ್ಣ ವ್ಯಂಗ್ಯವಾಡಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು,
‘ಎಸ್ಐಟಿ ರಚನೆಗೆ ಸ್ವಾಗತಿಸಿದ್ದ ಬಿಜೆಪಿ, ಅದರ ವರದಿ ಬರುವುದಕ್ಕೆ ಮುಂಚೆಯೇ ಎನ್ಐಎ ತನಿಖೆಗೆ ಒತ್ತಾಯಿಸುತ್ತಿದೆ. ಧರ್ಮಸ್ಥಳ ಪ್ರಕರಣ ಸೇರಿದಂತೆ ಎಲ್ಲಾ ಪ್ರಕರಣಗಳಲ್ಲೂ ನಮ್ಮ ಪಕ್ಷವನ್ನು ಹಿಂದೂ ವಿರೋಧಿಯಂತೆ ಬಿಂಬಿಸುತ್ತಿದ್ದಾರೆ. ಜಾತ್ಯತೀತ ದೇಶದಲ್ಲಿ ಬದುಕುತ್ತಿರುವ ನಾವು ಹಿಂದೂ ಎಂದು ಹೇಳಿಕೊಳ್ಳುವ ಅಗತ್ಯವಿಲ್ಲ. ಸೌಜನ್ಯ ಪ್ರಕರಣದಲ್ಲೂ ಬಿಜೆಪಿ ರಾಜಕೀಯ ಮಾಡುತ್ತಿದೆ. ಘಟನೆ ನಡೆದಾಗ ಅವರದ್ದೇ ಸರ್ಕಾರವಿದ್ದರೂ ಯಾಕೆ ತನಿಖೆ ಮಾಡಿ, ನ್ಯಾಯ ಕೊಡಿಸಲಿಲ್ಲ?’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.