ಕನಸವಾಡಿ (ದೊಡ್ಡಬಳ್ಳಾಪುರ): ಸಾಹಿತ್ಯ ಸಮ್ಮೇಳನದಲ್ಲಿ ವೃಷಭಾವತಿ ಕೊಳಚೆ ನೀರು ಶುದ್ಧೀಕರಿಸಿ ಹರಿಸುವ ವಿಚಾರವಾಗಿ ಪರ–ವಿರೋಧ ಚರ್ಚೆ ಜೋರಾಗಿ ನಡೆಯಿತು. ಜಟಾಪಟಿ ನಡೆಯುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಮತ್ತು ಶಾಸಕ ಧೀರಜ್ ಮುನಿರಾಜು ಜಾಣ ಮೌನ ಪ್ರದರ್ಶಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ಮಧುರೆ ಹೋಬಳಿಯ ಕೆರೆಗಳಿಗೆ ಬೆಂಗಳೂರಿನಲ್ಲಿ ಹರಿಯುತ್ತಿರುವ ವೃಷಭಾವತಿ ಕೊಳಚೆ ನೀರು ಶುದ್ಧೀಕರಿಸಿ ಹರಿಸುವ ಯೋಜನೆಯನ್ನು ಸರ್ಕಾರ ರದ್ದು ಮಾಡಬೇಕು. ಎತ್ತಿನಹೊಳೆ ಯೋಜನೆಯಲ್ಲಿ ಬರುವ ನೀರನ್ನು ಮಾತ್ರ ನಮ್ಮ ಹೋಬಳಿಯ ಕೆರೆಗಳಿಗೆ ಹರಿಸಬೇಕು ಎಂದು ಮಧುರೆ ಹೋಬಳಿಯ ಮಾರಸಂದ್ರದ ಯುವ ಮುಖಂಡ ರಮೇಶ್ ಆಗ್ರಹಿಸಿದರು.
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸಿರುವ ಪರಿಣಾಮ ಆ ಭಾಗದ ಜನರು ಹಲವಾರು ರೀತಿಯ ರೋಗಳಿಗೆ ಉತ್ತಾಗಿ ನರಳುವ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗಷ್ಟೇ ಸಂಸದ ಡಾ.ಕೆ.ಸುಧಾಕರ್ ಅವರು ಕೆ.ಸಿ.ವ್ಯಾಲಿ ನೀರಿನ ಕೆಟ್ಟ ಪರಿಣಾಮಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಇದೇ ಪರಿಸ್ಥಿತಿ ನಮ್ಮೂರಿನ ಕೆರೆಗಳಿಗು ಬರುವುದು ಬೇಡ, ಇಂತಹ ಕೊಳಚೆ ನೀರಿನಿಂದ ಅಂತರ್ಜಲ ಹೆಚ್ಚಾಗುವುದು ಬೇಡ. ವೃಷಭಾವತಿ ನೀರಿನ ಯೋಜನೆ ಜಾರಿಗೆ ಸರ್ಕಾರ ಮುಂದಾದರೆ ಪಕ್ಷಾತೀತವಾಗಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದಕ್ಕೆ ಆಕ್ಷೇಪಿಸಿದ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಚುಂಚೇಗೌಡ, ಎತ್ತಿನಹೊಳೆ ಯೋಜನೆ ಕುಡಿಯುವ ನೀರಿಗಾಗಿ ಮಾತ್ರ ಇರುವ ಯೋಜನೆ. ಹಾಗಾಗಿ ಈ ಭಾಗದಲ್ಲಿ ಕೃಷಿ ಉಳಿಯಬೇಕಿದ್ದರೆ ವೃಷಭಾವತಿ ನೀರನ್ನು ಶುದ್ದೀಕರಿಸಿ ಹರಿಸುವ ಸರ್ಕಾರದ ಯೋಜನೆ ಜಾರಿಯಾಗಬೇಕು. ಇದಕ್ಕೆ ನಮ್ಮ ಬೆಂಬಲ ಇದೆ’ ಎಂದರು.
ವೈಷಭಾವತಿ ಯೋಜನೆಯ ಪರ-ವಿರೋಧ ಚರ್ಚೆಗಳು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ಸಮ್ಮುಖದಲ್ಲೇ ಜೋರಾಗಿ ನಡೆರು ಸಹ ಯಾರೊಬ್ಬರು ಪ್ರತಿಕ್ರಿಯೆ ನೀಡಿದೆ ಮೌನವಹಿಸಿದ್ದರು.
ಕನ್ನಡದ ಭೌವ್ಯ ಪರಂಪರೆ ಉಳಿಸಲು ಬದ್ಧ
ಕನ್ನಡದ ಶಾಸನಗಳು ಐತಿಹಾಸಿಕವಾಗಿ ಹೆಸರು ಪಡೆದಿವೆ. ನಾಡಿನ ದೇಶದ ಇತಿಹಾಸ ದಾಖಲೆಯಲ್ಲಿ ಮಹತ್ವದ ಸ್ಥಾನ ಪಡೆದಿವೆ. ಕನ್ನಡದ ಭೌವ್ಯ ಪರಂಪರೆ ಉಳಿಸಲು ನಮ್ಮ ಸರ್ಕಾರ ಬದ್ಧವಾಗಿದೆ. ಕನ್ನಡ ಸಾಹಿತ್ಯ ಪರಿಷತ್‌ಗೆ ಎಲ್ಲಾರೀತಿಯ ಸಹಕಾರ ಹಾಗೂ ನೆರವು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ಶಾಸಕ ಧೀರಜ್ ಮುನಿರಾಜು 5ನೇ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ರಾಜಣ್ಣ ಡಿವೈಎಸ್ಪಿ ರವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.