ADVERTISEMENT

ದೊಡ್ಡಬಳ್ಳಾಪುರ: ‘ಬರ’ಕ್ಕೆ ಕಳೆಗುಂದಿದ ಸುಗ್ಗಿಹಬ್ಬ

​ಪ್ರಜಾವಾಣಿ ವಾರ್ತೆ
Published 13 ಜನವರಿ 2024, 15:26 IST
Last Updated 13 ಜನವರಿ 2024, 15:26 IST
ದೊಡ್ಡಬಳ್ಳಾಪುರ ಮಾರುಕಟ್ಟೆ ಪ್ರದೇಶದಲ್ಲಿ ಗ್ರಾಹಕರು ಇಲ್ಲದೆ ಇರುವುದು
ದೊಡ್ಡಬಳ್ಳಾಪುರ ಮಾರುಕಟ್ಟೆ ಪ್ರದೇಶದಲ್ಲಿ ಗ್ರಾಹಕರು ಇಲ್ಲದೆ ಇರುವುದು   

ದೊಡ್ಡಬಳ್ಳಾಪುರ: ಮಳೆಯ ಕೊರತೆಯಿಂದಾಗಿ ಸುಗ್ಗಿ ಹಬ್ಬ ಸಂಕ್ರಾಂತಿ ಈ ಬಾರಿ ಗ್ರಾಮೀಣ ಭಾಗದಲ್ಲಿ ಕಳೆಗುಂದಿದೆ. ದಿನನಿತ್ಯ ಧಾನ್ಯಗಳು, ಹೂ, ಹಣ್ಣುಗಳ ಬೆಲೆಯು ಏರಿಕೆಯಾಗಿದೆ.

ಸಂಕ್ರಾಂತಿ ಹಬ್ಬದಲ್ಲಿ ಹೋರಿಗಳ ಪಾತ್ರವೇ ಪ್ರಮುಖ. ಆದರೆ ಇತ್ತೀಚಿನ ಕೃಷಿಯಲ್ಲಿ ಹೋರಿಗಳ ಬಳಕೆ ಕ್ಷೀಣಿಸುತ್ತಿರುವ ಹಿಂದಿನ ಸಂಭ್ರಮಾಚರಣೆಗಳು ಕಾಣುತ್ತಿಲ್ಲವಾಗಿದೆ.

ದೇವಾಲಯಗಳಲ್ಲಿ ವಿಶೇಷ ಪೂಜೆಗಳಿಗಳಿಗೆ ಸಿದ್ದತೆಗಳು ನಡೆಯುತ್ತಿವೆ. ಸಂಕ್ರಾಂತಿಯಂದು ಹೆಚ್ಚಾಗಿ ಬಳಸುವ ಕಡಲೇಕಾಯಿ ಕೆ.ಜಿಗೆ ₹80, ಎಳ್ಳು ಬೆಲ್ಲ ಕೆಜಿಗೆ ₹180, ಸಿಹಿ ಗೆಣಸು ₹40, ಕಬ್ಬು ಒಂದು ಜಳವೆಗೆ ₹50, ಅವರೇಕಾಯಿ ಕೆ.ಜಿಗೆ ₹70 ನಾಲ್ಕು ದಿನಗಳ ಹಿಂದಿನ ದರಕ್ಕೆ ಹೋಲಿಕೆ ಮಾಡಿದರೆ ಬೆಳೆಗಳು ₹10 ರಿಂದ ₹15 ಗಳವರೆಗೂ ಹೆಚ್ಚಾಗಿದೆ.

ADVERTISEMENT

ಹೂವು ಹಣ್ಣಿನ ಬೆಲೆಗಳು ಸಹ ಗಗನಕ್ಕೇರಿದ್ದು ಕಾಕಡ ಕೆ.ಜಿಗೆ ₹800, ಕನಕಾಂಬರ ಕೆ.ಜಿಗೆ ₹1,500, ಸೇವಂತಿಗೆ, ಗುಲಾಬಿ ಮುಂತಾದ ಹೂವಿನ ಬೆಲೆಗಳು ₹200 ರವರೆಗೂ ಇವೆ. ತರಕಾರಿಗಳ ಬೆಲೆಗಳು ಸಾಧಾರಣವಾಗಿವೆ.

ತಾಲ್ಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಬ್ಬು ಬೆಳೆಯುವುದೇ ಕಡಿಮೆಯಾಗಿದ್ದು, ಕಬ್ಬನ್ನು ಹೊರಗಿನಿಂದ ತಂದು ಮಾರಾಟ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.