ADVERTISEMENT

ಉದ್ಯೋಗ ಸಿಗದ ಹತಾಶೆ: ಎಂಜಿನಿಯರಿಂಗ್ ಪದವೀಧರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 13:47 IST
Last Updated 19 ಆಗಸ್ಟ್ 2024, 13:47 IST
.
.   

ದೊಡ್ಡಬಳ್ಳಾಪುರ: ಉದ್ಯೋಗ ಸಿಗದ ಹತಾಶೆರಾಗಿದ್ದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರೊಬ್ಬರು ಡೆತ್‌ನೋಟ್‌ ಬರೆದು ಇಲ್ಲಿನ ವಿದ್ಯಾನಗರದಲ್ಲಿ ಭಾನುವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಬಿ.ಇ ಪದವಿ ಮುಗಿಸಿ ಏಳು ವರ್ಷ ಕಳೆದರೂ ಅರ್ಹತೆಗೆ ತಕ್ಕ ಉದ್ಯೋಗ ಸಿಗದ ಕಾರಣ ಬೇಸತ್ತು ಭರತ್ ಕುಮಾರ್ (29) ಆತ್ಮಹತ್ಯೆ  ಮಾಡಿಕೊಂಡಿದ್ದಾರೆ.

ತಂದೆ ನಿಧನರಾಗಿದ್ದು, ಅಕ್ಕ ಮತ್ತು ತಾಯಿಯೊಂದಿಗೆ ವಿದ್ಯಾನಗರದಲ್ಲಿ ಭರತ್‌ ಕುಮಾರ್‌ ವಾಸವಿದ್ದರು. ಬೆಂಗಳೂರಿನ ಸಂಬಂಧಿಕರ ಕಾರ್ಯಕ್ರಮಕ್ಕೆ ಭಾನುವಾರ ಅಕ್ಕ ಮತ್ತು ತಾಯಿ ತೆರಳಿದ್ದಾಗ ಮನೆಯಲ್ಲಿ ನೇಣು ಬಿಗಿದು ಕೊಂಡಿದ್ದಾರೆ. 

‘ನನ್ನ ಸಾವಿಗೆ ಯಾರು ಕಾರಣರಲ್ಲ. ನನ್ನ ದೊಡ್ಡ ಸೋಲಿಗೆ ನಾನೇ ಕಾರಣ’ ಎಂದು ಡೆತ್‌ನೋಟ್‌ ಬರೆದಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.