ದೊಡ್ಡಬಳ್ಳಾಪುರ: ಕೃಷಿಯೊಂದಿಗೆ ಬೆಸೆದುಕೊಂಡು ಬಂದಿರುವ ಹಬ್ಬಗಳನ್ನು ಸಾಮೂಹಿಕವಾಗಿ ಆಚರಣೆ ಮಾಡುವ ಮೂಲಕ ಕೃಷಿ ಸಂಸ್ಕೃತಿಯನ್ನು ಉಳಿಸಬೇಕಿದೆ ಎಂದು ಕೆಂಪೇಗೌಡ ಜಿಲ್ಲಾ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಶಾಂತಮ್ಮ ಹೇಳಿದರು.
ಅವರು ತಾಲ್ಲೂಕಿನ ಕೆಸ್ತೂರು ಗೇಟ್‌ನಲ್ಲಿನ ಕೃಷಿ ಕುಟೀರದಲ್ಲಿ ನಡೆದ ಸುಗ್ಗಿ ಹಬ್ಬದಲ್ಲಿ ಮಾತನಾಡಿದರು.
ಕೃಷಿಯಲ್ಲಿ ಆಧುನಿಕ ಯಂತ್ರಗಳ ಬಳಕೆ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳೊಂದಿಗೆ ಬೆಸೆದುಕೊಂಡರವ ಹಲವು ಆಚರಣೆಗಳು ಕಣ್ಮರೆಯಾಗುತ್ತಿವೆ. ಈ ಎಲ್ಲಾ ಚರಣೆಗಳನ್ನು ಆಚರಿಸಿಕೊಂಡು ಬರುತ್ತಿದ್ದ ಹಿರಿಯರು ಯುವ ಪಿಳಿಗೆಗೆ ಪರಿಚಯಿಸುವ ಕೆಲಸವನ್ನು ಸಂಘದಿಂದ ಮಾಡಲಾಗುತ್ತಿದೆ. ಸುಗ್ಗಿ ಹಬ್ಬದಲ್ಲಿ ಕೋಲಾಟ, ರಾಗಿ ರಾಶಿ ಪೂಜೆ, ಗೋ ಪೂಜೆ ಸೇರಿದಂತೆ ಒಕ್ಕಣೆ ಸಂದರ್ಭದಲ್ಲಿ ಕಣದಲ್ಲಿ ಆಚರಿಸುತ್ತಿದ್ದ ಎಲ್ಲಾವನ್ನು ಆಚರಿಸಲಾಗುತ್ತಿದೆ ಎಂದರು.
ಸಂಘದ ಮಹಿಳೆಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಸಂಘದ ಉಪಾಧ್ಯಕ್ಷೆ ಮಂಗಳ ರಮೇಶ್, ಕಾರ್ಯದರ್ಶಿ ಲಕ್ಷ್ಮೀ, ಸಹಕಾರ್ಯದರ್ಶಿ ಕಲ್ಪನ ಆನಂದ್, ಖಜಾಂಚಿ ರತ್ನಮ್ಮ ಅರಸೇಗೌಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.