ADVERTISEMENT

ದೊಡ್ಡಬಳ್ಳಾಪುರ | ಆಕಸ್ಮಿಕ ಬೆಂಕಿ: ಬೋರ್‌ವೆಲ್ ಲಾರಿ ಭಸ್ಮ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 4:53 IST
Last Updated 25 ಏಪ್ರಿಲ್ 2024, 4:53 IST
ದೊಡ್ಡಬಳ್ಳಾಪುರ ಸಮೀಪದ ಹಮಾಮ್‌ ಸಮೀಪ ಆಕಸ್ಮಿಕ ಬೆಂಕಿಯಿಂದ ಸುಟ್ಟು ಹೋದ ಬೋರ್‌ ವೆಲ್‌ ಲಾರಿ  
ದೊಡ್ಡಬಳ್ಳಾಪುರ ಸಮೀಪದ ಹಮಾಮ್‌ ಸಮೀಪ ಆಕಸ್ಮಿಕ ಬೆಂಕಿಯಿಂದ ಸುಟ್ಟು ಹೋದ ಬೋರ್‌ ವೆಲ್‌ ಲಾರಿ     

ದೊಡ್ಡಬಳ್ಳಾಪುರ:  ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯ ಹಮಾಮ್ ಗ್ರಾಮದ ಕೊಳವೆ ಬಾವಿ ಕೊರೆಯುವ ಲಾರಿ ನಿಲುಗಡೆ ಮಾಡಿದ್ದ ಶೆಡ್‌ನಲ್ಲಿ ಮಂಗಳವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಬೋರ್‌ವೆಲ್ ಸಪೋರ್ಟ್ ಲಾರಿ ಸಂಪೂರ್ಣ ಸುಟ್ಟು ಭಸ್ಮವಾಗಿದೆ.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ‌ ಸಿಬ್ಬಂದಿ ಬೆಂಕಿ‌ ನಂದಿಸಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಒಂದು ಬೋರ್ ವೆಲ್ ಸಪೋರ್ಟ್ ಲಾರಿ ಸೇರಿದಂತೆ ಸುಮಾರು ₹2 ಕೋಟಿ ಮೌಲ್ಯದ ವಸ್ತು ಭಸ್ಮವಾಗಿವೆ ಎಂದು ಸ್ಥಳೀಯ ನಿವಾಸಿ ವೆಂಕಟೇಶ್ ತಿಳಿಸಿದ್ದಾರೆ.

ತಮಿಳುನಾಡು ಮೂಲದ ಬೋರ್‌ವೆಲ್ ಲಾರಿ ಮಾಲೀಕ ಹಮಾಮ್ ಬಳಿ 8 ವರ್ಷಗಳ ಹಿಂದೆ ಬಾಡಿಗೆ ಸ್ಥಳದಲ್ಲಿ ಶೆಡ್ ನಿರ್ಮಿಸಿಕೊಂಡು ಬೋರ್‌ವೆಲ್ ಲಾರಿ ಹಾಗೂ ಬೋರ್ ವೆಲ್‌ಗೆ ಸಂಬಂಧಪಟ್ಟ ವಸ್ತುಗಳನ್ನು ಇರಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.