ADVERTISEMENT

ದೊಡ್ಡಬಳ್ಳಾಪುರ | ರಾಷ್ಟ್ರೀಯ ಯುವ ದಿನ: ಸೈಕಲ್‌ ಜಾಥಾ

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 12:28 IST
Last Updated 13 ಜನವರಿ 2025, 12:28 IST
ದೊಡ್ಡಬಳ್ಳಾಪುರದಲ್ಲಿ ಸ್ವಾಮಿವಿವೇಕಾನಂದ ದಿನಾಚರಣೆ ಅಂಗವಾಗಿ‌ ಎನ್‌.ಸಿ.ಸಿ ವಿದ್ಯಾರ್ಥಿಗಳಿಂದ ಸೈಕಲ್‌ ಜಾಥಾ ನಡೆಯಿತು
ದೊಡ್ಡಬಳ್ಳಾಪುರದಲ್ಲಿ ಸ್ವಾಮಿವಿವೇಕಾನಂದ ದಿನಾಚರಣೆ ಅಂಗವಾಗಿ‌ ಎನ್‌.ಸಿ.ಸಿ ವಿದ್ಯಾರ್ಥಿಗಳಿಂದ ಸೈಕಲ್‌ ಜಾಥಾ ನಡೆಯಿತು   

ದೊಡ್ಡಬಳ್ಳಾಪುರ:  ಸ್ವಾಮಿವಿವೇಕಾನಂದ ಜನ್ಮದಿನ ಹಾಗೂ ರಾಷ್ಟ್ರೀಯ ಯುವ ದಿನದ ಅಂಗವಾಗಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀಕೊಂಗಾಡಿಯಪ್ಪ ಪಿ.ಯು ಮತ್ತು ಪದವಿ ಕಾಲೇಜಿನ ಎನ್‌.ಸಿ.ಸಿ ಕರ್ನಾಟಕ 5ನೇ ಬೆಟಲಿಯನ್ ವತಿಯಿಂದ ಸೈಕಲ್ ಜಾಥಾ ನಡೆಯಿತು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಆರಂಭವಾದ ಜಾಥಾ ನಾಗರಕೆರೆ ಬಳಿ ಕೊನೆಗೊಂಡಿತು.

ಸೈಕಲ್ ಜಾಥಾಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸದಾಶಿವರಾಮಚಂದ್ರಗೌಡ, ಕೊಂಡಾಡಿಯಪ್ಪ ಪಿ.ಯು ಹಾಗೂ ಪದವಿ ಕಾಲೇಜಿನ ಪ್ರಾಂಶುಪಾಲ ಆನಂದಮೂರ್ತಿ, ಎನ್‌ಸಿಸಿ ಲೆಫ್ಟಿನೆಂಟ್ ಪ್ರವೀಣ್, ರಾಜಕುಮಾರ್, ಶ್ರೀಕಾಂತ್ ಹಾಗೂ 5ನೇ ಕರ್ನಾಟಕ ಎನ್‌.ಸಿ.ಸಿ. ಬೆಟಲಿಯನ್ ಅಧಿಕಾರಿಗಳು ಚಾಲನೆ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.