ADVERTISEMENT

ಒಣಗಿದ ಮರ ತೆರವು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 12:26 IST
Last Updated 2 ನವೆಂಬರ್ 2019, 12:26 IST
ವಿಜಯಪುರದ ಹಳೇ ಕೆನರಾ ಬ್ಯಾಂಕಿನ ಮುಂಭಾಗದಲ್ಲಿ ಒಣಗಿದ ಮರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತೆರವುಗೊಳಿಸಿದರು
ವಿಜಯಪುರದ ಹಳೇ ಕೆನರಾ ಬ್ಯಾಂಕಿನ ಮುಂಭಾಗದಲ್ಲಿ ಒಣಗಿದ ಮರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತೆರವುಗೊಳಿಸಿದರು   

ವಿಜಯಪುರ: ಪಟ್ಟಣದ ಹಲವು ಕಡೆಗಳಲ್ಲಿ ಒಣಗಿದ್ದ ಮರಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತೆರವು ಮಾಡಿಸಿದ್ದರಿಂದ ಜನರು ನೆಮ್ಮದಿಯಿಂದ ಸಂಚಾರ ಮಾಡುವಂತಾಗಿದೆ.

ಇಲ್ಲಿನ ಹಳೇ ಕೆನರಾ ಬ್ಯಾಂಕ್ ರಸ್ತೆ, ಪದವಿ ಪೂರ್ವ ಕಾಲೇಜು ರಸ್ತೆ ರಸ್ತೆ ಸೇರಿದಂತೆ ರಸ್ತೆಗಳ ಇಕ್ಕೆಲುಗಳಲ್ಲಿ ಒಣಗಿ ಹೋಗಿದ್ದ ಮರಗಳಿಂದ ಕೊಂಬೆಗಳು ಮುರಿದು ಬೀಳುತ್ತಿದ್ದ ಪರಿಣಾಮವಾಗಿ ಜನರು ಆತಂಕದಲ್ಲೇ ಸಂಚಾರ ಮಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ಹಲವಾರು ಬಾರಿ ಪುರಸಭೆ ಅಧಿಕಾರಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ಕೊಟ್ಟಿದ್ದರೂ ಪ್ರಯೋಜನವಾಗಿರಲಿಲ್ಲ. ಈಗ ಅಧಿಕಾರಿಗಳು ಇಂಥ ಮರಗಳನ್ನು ತೆರವುಗೊಳಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಮಂಜುನಾಥ್ ತಿಳಿಸಿದರು.

ಅರಣ್ಯ ಇಲಾಖೆಯ ಅಧಿಕಾರಿ ಆನಂದ್ ಮಾತನಾಡಿ, ಒಣಗಿರುವ ಮರಗಳ ತೆರವಿಗಾಗಿ ಪುರಸಭೆಯವರು ಹಣ ಪಾವತಿ ಮಾಡಿದ್ದರು. ಮರಗಳು ತೆರವು ಮಾಡಬೇಕಾದರೆ ಅನುಮತಿ ಬೇಕಾಗುತ್ತದೆ. ಆದ್ದರಿಂದ ತಡವಾಗಿತ್ತು. ಒಣಗಿರುವ ಮರಗಳನ್ನು ತೆರವುಗೊಳಿಸುತ್ತಿದ್ದೇವೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.