ADVERTISEMENT

ಪೌರ ಕಾರ್ಮಿಕರಿಗೆ ಸೌಲಭ್ಯಕ್ಕೆ ಒತ್ತು

ಆನೇಕಲ್‌ ಪುರಸಭೆ ಅಧ್ಯಕ್ಷರಿಂದ ರೈನ್‌ ಕೋಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 4:15 IST
Last Updated 22 ಜುಲೈ 2021, 4:15 IST
ಆನೇಕಲ್‌ನಲ್ಲಿ ಪೌರ ಕಾರ್ಮಿಕರಿಗೆ ಅಧ್ಯಕ್ಷ ಎನ್.ಎಸ್. ಪದ್ಮನಾಭ ರೈನ್‌ಕೋಟ್‌ ವಿತರಿಸಿದರು
ಆನೇಕಲ್‌ನಲ್ಲಿ ಪೌರ ಕಾರ್ಮಿಕರಿಗೆ ಅಧ್ಯಕ್ಷ ಎನ್.ಎಸ್. ಪದ್ಮನಾಭ ರೈನ್‌ಕೋಟ್‌ ವಿತರಿಸಿದರು   

ಆನೇಕಲ್: ‘ಪೌರ ಕಾರ್ಮಿಕರು ಪಟ್ಟಣದ ಜೀವಾಳವಾಗಿದ್ದಾರೆ. ಮಳೆ, ಗಾಳಿ, ಚಳಿ ಲೆಕ್ಕಿಸದೇ ಪಟ್ಟಣದ ಸ್ವಚ್ಛತೆಯಲ್ಲಿ ತೊಡಗಿಕೊಂಡಿರುವ ಪೌರ ಕಾರ್ಮಿಕರಿಗೆ ಅವಶ್ಯಕ ಸೌಲಭ್ಯ ಕಲ್ಪಿಸುವುದು ಪುರಸಭೆಯ ಜವಾಬ್ದಾರಿಯಾಗಿದೆ’ ಎಂದು ಆನೇಕಲ್‌ ಪುರಸಭೆ ಅಧ್ಯಕ್ಷ ಎನ್‌.ಎಸ್‌. ಪದ್ಮನಾಭ ತಿಳಿಸಿದರು.

ಪಟ್ಟಣದಲ್ಲಿ ಪುರಸಭೆಯಿಂದ ಪೌರ ಕಾರ್ಮಿಕರಿಗೆ ರೈನ್‌ಕೋಟ್‌ ವಿತರಿಸಿ ಅವರು ಮಾತನಾಡಿದರು.

ಮಳೆಗಾಲ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಪೌರ ಕಾರ್ಮಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ರೈನ್‌ಕೋಟ್‌ ವಿತರಿಸಲಾಗಿದೆ. ಈ ಹಿಂದೆ ಎಲ್ಲಾ ಪೌರ ಕಾರ್ಮಿಕರಿಗೂ ಸುರಕ್ಷತಾ ಕಿಟ್‌ ನೀಡಲಾಗಿದೆ. ಪುರಸಭೆಯಿಂದ ಎಲ್ಲಾ ಸೌಲಭ್ಯ ನೀಡಲಾಗುವುದು. ಪಟ್ಟಣದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಿ ಸುಂದರ ಪಟ್ಟಣವನ್ನಾಗಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು
ಹೇಳಿದರು.

ADVERTISEMENT

ಪಟ್ಟಣದ ವಾಣಿಜ್ಯ ಮಳಿಗೆಗಳು ಮತ್ತು ಬೀದಿಬದಿ ವ್ಯಾಪಾರಿಗಳ ಕಸ ಸಂಗ್ರಹಣೆಗಾಗಿ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದ ಸ್ವಚ್ಛತೆಗೆ ಅಂಗಡಿ ಮಾಲೀಕರು ಸಹಕಾರ ನೀಡಬೇಕು. ಕಸವನ್ನು ಪ್ರತ್ಯೇಕ ವಾಹನದಲ್ಲಿಯೇ ವಿಲೇ ಮಾಡಬೇಕು ಎಂದರು.

ಉಪಾಧ್ಯಕ್ಷೆ ಲಲಿತಾ ಲಕ್ಷ್ಮೀನಾರಾಯಣ್‌, ಸದಸ್ಯ ರಾಜಪ್ಪ, ಮುಖ್ಯಾಧಿಕಾರಿ ನಟರಾಜ್‌
ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.