ADVERTISEMENT

ದೊಡ್ಡಬಳ್ಳಾಪುರ: ಪಾಲನಜೋಗಹಳ್ಳಿ ಬಳಿ ವಿಮಾನ ಮಾದರಿ ಡ್ರೋನ್ ಪತ್ತೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 21:36 IST
Last Updated 30 ಜನವರಿ 2026, 21:36 IST
   

ದೊಡ್ಡಬಳ್ಳಾಪುರ: ಎಂಜಿನಿಯರಿಂಗ್ ವಿದ್ಯಾರ್ಥಿಗಳು ಪರೀಕ್ಷಾರ್ಥವಾಗಿ ತಯಾರಿಸಿದ ವಿಮಾನ ಮಾದರಿಯ ಡ್ರೋನ್ ಪಾಲನಜೋಗಹಳ್ಳಿಯ ಮನೆ ಬಳಿ ಬಿದ್ದಿದೆ.

ಹಾರುತ್ತಾ ಬಂದ ಡ್ರೋನ್ ಏಕಾಏಕಿ ನಗರದ ಹೊರವಲಯದ ಪಾಲನಜೋಗಹಳ್ಳಿಯ 10ನೇ ಕ್ರಾಸ್ ಬಳಿ ಬಿದ್ದಿದೆ. ಡ್ರೋನ್ ಕಂಡು ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಡ್ರೋನ್ ವಶಕ್ಕೆ ಪಡೆದಿದ್ದಾರೆ.

ತಜ್ಞರಿಂದ ಪರಿಶೀಲನೆ ನಡೆಸ ಲಾಗಿದೆ. ಡ್ರೋನ್‌ಗೆ ಬಳಸುವ ರೀತಿಯಲ್ಲಿ ಬ್ಯಾಟರಿಗಳು ಸೇರಿದಂತೆ ಎಲೆಕ್ಟ್ರಿಕ್ ವೈರ್‌ಗಳಿಂದ ತುಂಬಿದೆ ಎನ್ನಲಾಗಿದೆ.

ADVERTISEMENT

ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಯಾರಿಸಿ, ಪರೀಕ್ಷಾರ್ಥವಾಗಿ ಹಾರಿಸಿದ ವೇಳೆ, ಸಂಪರ್ಕ ಕಡಿತಗೊಂಡು ಬಿದ್ದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.