ADVERTISEMENT

ಹೊಸಕೋಟೆಯ ನಕಲಿ ಆಸ್ಪತ್ರೆಗೆ ಬೀಗ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2020, 6:37 IST
Last Updated 13 ಡಿಸೆಂಬರ್ 2020, 6:37 IST
ಹೊಸಕೋಟೆ ಎಂ.ವಿ. ಬಡಾವಣೆಯಲ್ಲಿರುವ ಸುಜಾತ ಕ್ಲಿನಿಕ್‌
ಹೊಸಕೋಟೆ ಎಂ.ವಿ. ಬಡಾವಣೆಯಲ್ಲಿರುವ ಸುಜಾತ ಕ್ಲಿನಿಕ್‌   

ಹೊಸಕೋಟೆ: ನಗರದ ಎಂ.ವಿ ಬಡಾವಣೆಯಲ್ಲಿರುವ ಸುಜಾತ ಕ್ಲಿನಿಕ್‌ನ ಆಯುರ್ವೇದ ವೈದ್ಯ ಮೋಹನ್ ಅಲೋಪತಿ ಔಷಧ ನೀಡಿ ವಂಚಿಸುತ್ತಿದ್ದ ಆರೋಪದ ಮೇಲೆ ತಾಲ್ಲೂಕು ವೈದ್ಯಾಧಿಕಾರಿ ಡಾ. ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿ ಆಸ್ಪತ್ರೆಗೆ ಬೀಗ ಹಾಕಿದೆ.

ಡಾ.ಮಂಜುನಾಥ್ ಮಾತನಾಡಿ, ಆಯುರ್ವೇದ ವೈದ್ಯರು ಅಲೋಪತಿ ಔಷಧ ನೀಡುವುದು ಕಾನುನು ಬಾಹಿರ. ಯಾವುದೇ ಪರವಾನಗಿ ಇಲ್ಲದೆ ಸುಮಾರು ₹10 ಲಕ್ಷ ಮೌಲ್ಯದ ಅಲೋಪತಿ ಔಷಧ ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎಂದರು.

ಭಾರತೀಯ ವೈದ್ಯ ಅಸೋಸಿಯೇಷನ್ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ನಾಗರಾಜ್ ಮಾತನಾಡಿ, ಪರವಾನಗೆ ಇಲ್ಲದೆ ಅಕ್ರಮವಾಗಿ ಅಲೋಪತಿ ಔಷಧ ದಾಸ್ತಾನು ಮಾಡಿರುವುದು ಕಾನೂನು ಬಾಹಿರ. ಈ ಬಗ್ಗೆ ಜಿಲ್ಲಾಧಿಕಾರಿಗೆ ಹಾಗೂ ಜಿಲ್ಲಾ ವೈದ್ಯಾಧಿಕಾರಿಗೆ ಮಾಹಿತಿ ನೀಡಲಾಗುವುದು ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.