ADVERTISEMENT

ದಾಬಸ್‌ಪೇಟೆ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿನ ಕಸದ ರಾಶಿಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 27 ಜನವರಿ 2026, 2:40 IST
Last Updated 27 ಜನವರಿ 2026, 2:40 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 648ರ ನಾಗಸಂದ್ರ ಅಂಡರ್‌ಪಾಸ್‌ ಸಮೀಪ ಕಸದ ರಾಶಿ ಹೊತ್ತಿ ಉರಿಯುತ್ತಿರುವುದು
ದೊಡ್ಡಬಳ್ಳಾಪುರ ತಾಲ್ಲೂಕಿನ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 648ರ ನಾಗಸಂದ್ರ ಅಂಡರ್‌ಪಾಸ್‌ ಸಮೀಪ ಕಸದ ರಾಶಿ ಹೊತ್ತಿ ಉರಿಯುತ್ತಿರುವುದು   

ದೊಡ್ಡಬಳ್ಳಾಪುರ: ದಾಬಸ್‌ಪೇಟೆ-ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ 648ರಲ್ಲಿನ ನಾಗಸಂದ್ರ ಅಂಡರ್‌ ಪಾಸ್‌ ಸಮೀಪ ಕಸದ ರಾಶಿಗೆ ದಾರಿಹೋಕರು ಬೆಂಕಿ ಹಚ್ಚಿದ್ದರಿಂದ ದಟ್ಟ ಹೊಗೆಯೊಂದಿಗೆ ಕಸದ ರಾಶಿ ಹೊತ್ತಿ ಉರಿಯಿತು.

ನಗರಕ್ಕೆ ಸಮೀಪದಲ್ಲಿರುವ ಈ ಅಂಡರ್‌ಪಾಸ್ ಬಳಿ ಕಸ ತಂದು ರಾಶಿ ಹಾಕುವವರ ಸಂಖ್ಯೆ ಮೀತಿ ಮೀರಿದೆ. ಹೆದ್ದಾರಿ ಬದಿಯಲ್ಲೇ ಇರುವುದರಿಂದ ರಸ್ತೆಯಲ್ಲಿ ಹೋಗುವ ವಾಹನಗಳು ಅಪಾಯಕ್ಕೆ ಸಿಲುಕುವ ಸಂಭವ ಹೆಚ್ಚಾಗಿದೆ. ಹೆದ್ದಾರಿಯಲ್ಲಿ ಆಧುನಿಕ ಗುಣಮಟ್ಟದ ಸಿ.ಸಿ.ಟಿವಿ ಕ್ಯಾಮೆರಾಗಳು ಇರುವುದರಿಂದ ಟೋಲ್‌ ಸಂಗ್ರಹ ಮಾಡುವವರು ರಸ್ತೆ ಬದಿಯಲ್ಲಿ ಕಸ ತಂದು ಹಾಕುವವರನ್ನು ಪತ್ತೆ ಮಾಡುವ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT