ADVERTISEMENT

ಉಚಿತ ಆಂಬುಲೆನ್ಸ್ ವಾಹನ ಸೇವೆಗೆ ಚಾಲನೆ 

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 6:59 IST
Last Updated 20 ಜನವರಿ 2026, 6:59 IST
ವಿಜಯಪುರದ ಶಹೆನಾಜ್ ಉನ್ನೀಸ್ ಟ್ರಸ್ಟ್ ಆರಂಭಿಸಿದ ಉಚಿತ ಆಂಬುಲೆನ್ಸ್ ಸೇವೆಗೆ ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ಚಾಲನೆ ನೀಡಿದರು. ವಾಣಿಜ್ಯೋದ್ಯಮಿ ನಯಾಜ್ ಪಾಷಾ ಇದ್ದರು.
ವಿಜಯಪುರದ ಶಹೆನಾಜ್ ಉನ್ನೀಸ್ ಟ್ರಸ್ಟ್ ಆರಂಭಿಸಿದ ಉಚಿತ ಆಂಬುಲೆನ್ಸ್ ಸೇವೆಗೆ ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ಚಾಲನೆ ನೀಡಿದರು. ವಾಣಿಜ್ಯೋದ್ಯಮಿ ನಯಾಜ್ ಪಾಷಾ ಇದ್ದರು.   

ವಿಜಯಪುರ (ದೇವನಹಳ್ಳಿ): ಪಟ್ಟಣದ 9ನೇ ವಾರ್ಡ್‌ ವಾಣಿಜ್ಯೋದ್ಯಮಿ ನಯಾಜ್ ಪಾಷಾ ಅವರು ತಮ್ಮ ತಾಯಿ ಹೆಸರಿನ ಶಹೆನಾಜ್ ಉನ್ನೀಸ್ ಟ್ರಸ್ಟ್ ವತಿಯಿಂದ ಉಚಿತ ಆಂಬುಲೆನ್ಸ್ ಸೇವೆ ಆರಂಭಿಸಿದ್ದಾರೆ.

ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್ ಸೋಮವಾರ ಉಚಿತ ಆಂಬುಲೆನ್ಸ್ ಸೇವೆಗೆ ಚಾಲನೆ ನೀಡಿದರು. ತುರ್ತು ಸಂದರ್ಭದಲ್ಲಿ  ರೋಗಿಗಳನ್ನು ಆಸ್ಪತ್ರೆಗೆ ಕರೆದೋಯ್ಯಲು ನಯಾಜ್ ಪಾಷಾ ಕುಟುಂಬ ಸ್ವಂತ ಹಣದಲ್ಲಿ ಆಂಬುಲೆನ್ಸ್ ವಾಹನ ನೀಡುವ ಮೂಲಕ ಶ್ರೇಷ್ಠ ಕಾರ್ಯ ಮಾಡಿದ್ದಾರೆ ಎಂದರು.

‘ಸಮಾಜದಿಂದ ಪಡೆಯುವುದಷ್ಟೇ ಅಲ್ಲ, ನಾವು ಸಮಾಜಕ್ಕೆ ಹಿಂದಿರುಗಿಸುವ ಕೆಲಸ ಮಾಡಬೇಕಿದೆ. ಸಮಾಜಮುಖಿ ಕೆಲಸಗಳಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ’ ಎಂದು ವಾಣಿಜ್ಯೋದ್ಯಮಿ ನಯಾಜ್ ಪಾಷಾ ಹೇಳಿದರು.

ADVERTISEMENT

ಜಯಪುರ ಟೌನ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜು, ಅಲ್ಪಸಂಖ್ಯಾತ ಜಿಲ್ಲಾಧ್ಯಕ್ಷ ಮುಬಾರಕ್, ಏಜಾಜ್, ಪುರಸಭೆ ಸದಸ್ಯರಾದ ರಾಜಣ್ಣ, ನಾರಾಯಣಸ್ವಾಮಿ, ಇಕ್ಬಾಲ್, ಗ್ಯಾರಂಟಿ ತಾಲ್ಲೂಕು ಸದಸ್ಯ ಮಂಜುನಾಥ್, ಎಸ್ ಸಿ ಘಟಕದ ಅಧ್ಯಕ್ಷ ವೇಣುಗೋಪಾಲ್, ಹರೀಶ್, ಗಿರೀಶ್, ಸನಾವುಲ್ಲ, ರಮೇಶ್, ಮುನಿನಾರಾಯಣಪ್ಪ, ಚಾಂದ್ ಪಾಷಾ, ಹಬೀಬ್, ಸಮೀರ್, ಸುದರ್ಶನ, ಚೇತನ್ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.