ADVERTISEMENT

ಶುದ್ದ ನೀರು; ಕಾಯಿಲೆಗಳಿಂದ ಮುಕ್ತಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 13:54 IST
Last Updated 25 ಫೆಬ್ರುವರಿ 2020, 13:54 IST
ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಸಜ್ಜಿತವಾದ ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು
ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಸಜ್ಜಿತವಾದ ಶುದ್ದ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಲಾಯಿತು   

ಆನೇಕಲ್: ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶುದ್ದ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ಮ್ಯಾಂಚೆಸ್ಟರ್‌ ಸಿಟಿಯ ಸಿಟಿಜನ್ಸ್ ಗಿವಿಂಗ್‌ ಯೋಜನೆಯಡಿ ಆನೇಕಲ್‌ ತಾಲ್ಲೂಕಿನ ಅತ್ತಿಬೆಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಶುದ್ದ ಕುಡಿಯುವ ನೀರಿನ ಘಟಕ ನೀಡಿದೆ.

ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿರುವ ಶುದ್ದ ಕುಡಿಯುವ ನೀರಿನ ಘಟಕದಲ್ಲಿ ಫಿಲ್ಟರೇಷನ್‌ ಟವರ್‌ಗಳನ್ನು ಅನುಷ್ಠಾನಗೊಳಿಸಲು ಜೈಲಂ ಮತ್ತು ಪ್ಲಾನೆಟ್‌ ವಾಟರ್‌ ಫೌಂಡೇಷನ್‌ ಯೋಜನೆಗೆ ಜೊತೆಗೂಡಿದೆ. ಇದರಿಂದ ಅತ್ತಿಬೆಲೆ ಸರ್ಕಾರಿ ಶಾಲೆಯ ಸುಮಾರು 1,800 ವಿದ್ಯಾರ್ಥಿಗಳು ಕುಡಿಯುವ ನೀರಿನ ಸೌಲಭ್ಯ ಬಳಸಲು ಅನುವಾಗಿದೆ. ಶಾಲೆಯ ಶೌಚಾಲಯಗಳ ನೈರ್ಮಲೀಕರಣಕ್ಕಾಗಿ ಅಕ್ವಾಸ್ಯಾನ್‌ ಲೆಟ್ರೀನ್‌ ಸ್ಯಾನಿಟೇಷನ್‌ ಸಿಸ್ಟಂ ಅಳವಡಿಸಲಾಗಿದೆ.

ಘಟಕದ ಉದ್ಘಾಟನೆ ನೆರವೇರಿಸಿದ ಸಿಟಿ ಫುಟ್‌ಬಾಲ್‌ ಫೌಂಡೇಷನ್‌ನ ನಿರ್ದೇಶಕ ಟಾಮ್‌ ಪಿಚಾನ್‌ ಮಾತನಾಡಿ, ‘ಸ್ಥಳೀಯ ಸಮುದಾಯಗಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಪರಿಶುದ್ದ ನೀರಿನ ಪೂರೈಕೆಯಲ್ಲಿ ನೈಪುಣ್ಯತೆ ಸಾಧಿಸಿರುವ ಜೈಲಂ ಜೊತೆಗೂಡಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಇದು ದೀರ್ಘಕಾಲ ಉಪಯುಕ್ತವಾಗಲಿ. ವಿದ್ಯಾರ್ಥಿಗಳ ಇದರ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.

ADVERTISEMENT

ಜೈಲಂನ ಹಿರಿಯ ಉಪಾಧ್ಯಕ್ಷ ಜೋ ವೇಸೇ ಮಾತನಾಡಿ, ‘ಅಶುದ್ದ ನೀರಿನಿಂದ ಹಲವಾರು ಕಾಯಿಲೆಗಳು ಬರುತ್ತವೆ. ಹಾಗಾಗಿ ಶುದ್ದ ಕುಡಿಯುವ ನೀರಿನ ಪೂರೈಕೆಯಿಂದ ಈ ರೋಗಗಳನ್ನು ತಡೆಯಲು ಸಾಧ್ಯ’ ಎಂದರು.

ಮ್ಯಾಂಚೇಸ್ಟರ್‌ ಸಿಟಿಯ ಲೆಜೆಂಡ್‌ ಪಾಲ್‌ ಡಿಕೋವ್‌, ಶಾಲಾ ಮುಖ್ಯೋಪಾಧ್ಯಾಯಿನಿ ಅನುರಾಧಮ್ಮ, ಸಮೂಹ ಸಂಪನ್ಮೂಲ ವ್ಯಕ್ತಿ ದತ್ತಾತ್ತ್ರೇಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.