ADVERTISEMENT

ಹೊಸಕೋಟೆ | ಲಾಲ್‌ಬಾಗ್ ದಾಸರಹಳ್ಳಿ ಗಣೇಶ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 2:42 IST
Last Updated 10 ಸೆಪ್ಟೆಂಬರ್ 2025, 2:42 IST
ವಿವಿಧ ಕಲಾತಂಡಗಳೊಂದಿಗೆ ಗಣೇಶ ವಿಸರ್ಜನಾ ಮೆರವಣಿಗೆ 
ವಿವಿಧ ಕಲಾತಂಡಗಳೊಂದಿಗೆ ಗಣೇಶ ವಿಸರ್ಜನಾ ಮೆರವಣಿಗೆ    

ಹೊಸಕೋಟೆ: ತಾಲ್ಲೂಕಿನ ಕಸಬಾ ಹೋಬಳಿಯ ಲಾಲ್‌ಬಾಗ್ ದಾಸರಹಳ್ಳಿಯಲ್ಲಿ ರೈತರ ಮಕ್ಕಳ ರಾಯಲ್ ಬಾಯ್ಸ್ ಗೆಳೆಯರ ಬಳಗದ 9 ನೇ ವರ್ಷದ ಗಣೇಶೋತ್ಸವ ಮತ್ತು ವಿಸರ್ಜನೆ ವಿಜೃಂಭಣೆಯಿಂದ ಜರುಗಿತು.

ಗ್ರಾಮದ ಪ್ರಮುಖ ರಸ್ತೆಗಳ ಮೂಲಕ ಹಾಯ್ದು ಹೋದ ವಿಸರ್ಜಾನಾ ಮೆರವಣಿಗೆಗೆ ಕೇರಳದ ಸೀಗಾರಿ ಮೇಳ, ತಮಟೆ, ಡೊಳ್ಳುಕುಣಿತ, ವೀರಗಾಸೆ ಸೇರಿದಂತೆ ವಿವಿಧ ಕಲಾ ತಂಡಗಳು ಮೆರುಗು ನೀಡಿದವು.  

ಇದಕ್ಕೂ ಮುನ್ನ ನಡೆದ ಸಮಾರಂಭದಲ್ಲಿ ಮಾತನಾಡಿದ ರೈತ ಮುರುಳಿ, ರೈತರನ್ನು ಕೇವಲ ಹೆಸರಿಗೆ ಮಾತ್ರ ದೇಶದ ಬೆನ್ನೆಲಬು ಎನ್ನುತ್ತಿರುವ ಸರ್ಕಾರಗಳು ರೈತರಿಗೆ ಬೆಂಬಲ ಬೆಲೆ ನೀಡಲು ಮೀನಮೇಷ ಎಣಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಗ್ರಾಮದ ರೈತರ ಮಕ್ಕಳು ಸೇರಿ ಪರಿಸರ ಸ್ನೇಹಿ ಗಣಪ ಮತ್ತು ಗೌರಿಯನ್ನು ಪ್ರತಿಷ್ಠಾಪಿಸಿ ಪ್ರತಿನಿತ್ಯ  ಪೂಜೆ, ಪ್ರಸಾದ ವಿನಿಯೋಗ ಮಾಡಿದರು. ಮಕ್ಕಳು ಮತ್ತು ಮಹಿಳೆಯರಿಗೆ ರಂಗೋಲಿ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. 

ಈ ಸಂಧರ್ಭದಲ್ಲಿ ರೈತರ ಮಕ್ಕಳು ರಾಯಲ್ ಬಾಯ್ಸ್ ಗೆಳೆಯರ ಬಳಗದವರು ಹಾಗೂ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.