ಆನೇಕಲ್: ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ 10 ಕೆ.ಜಿ. ಗಾಂಜಾವನ್ನು ಜಿಗಣಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನ ಸೂಳಗಿರಿ ಸಮೀಪದ ದೊರಹಳ್ಳಿಯ ಮುನಿರಾಜು(28) ಮತ್ತು ಅಸ್ಸಾಂನ ದೀರೇನ್ ಕಲಂದ್ರಿ(21) ಆರೋಪಿಗಳು
ನಂಜಾಪುರ ಸಮೀಪದ ಎಸ್‌ಡಿಎಂಎಲ್ ಮೆಡೋಸ್ ಬಳಿ ಆರೋಪಿಗಳು ಗಾಂಜಾ ಮಾರಾಟದಲ್ಲಿ ಆರೋಪಿಗಳು ತೊಡಗಿದ್ದರು.
ಜಿಗಣಿ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಕೆ.ವಿಶ್ವನಾಥ್ ಮತ್ತು ಸಬ್‌ಇನ್‌ಸ್ಪೆಕ್ಟರ್ ಶಿವಲಿಂಗನಾಯಕ್ ಮತ್ತು ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.