ADVERTISEMENT

ಪೂರ್ಣಿಮಾಗೆ ಸಚಿವ ಸ್ಥಾನ ನೀಡಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 13:23 IST
Last Updated 3 ಆಗಸ್ಟ್ 2019, 13:23 IST
ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳುವಂತೆ ಹೊಸಕೋಟೆಯ ಯಾದವ ಯುವ ಸೇನಾ ಕಾರ್ಯಕರ್ತರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಗ್ರಹಿಸಿದರು
ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಳ್ಳುವಂತೆ ಹೊಸಕೋಟೆಯ ಯಾದವ ಯುವ ಸೇನಾ ಕಾರ್ಯಕರ್ತರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಗ್ರಹಿಸಿದರು   

ಹೊಸಕೋಟೆ: ಕಳೆದ 10 ವರ್ಷಗಳಿಂದ ಯಾದವ ಜನಾಂಗದ ಯಾರೊಬ್ಬ ಶಾಸಕರೂ ಸಚಿವರಾಗಿಲ್ಲ. ಹೀಗಾಗಿ ಈ ಬಾರಿಯ ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡಬೇಕೆಂದು ತಾಲ್ಲೂಕು ಯಾದವ ಯುವ ಸೇನಾ ಅಧ್ಯಕ್ಷ ಮಂಜುನಾಥ್ ಆಗ್ರಹಿಸಿದರು.

ಅವರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ಎ.ಕೃಷ್ಣಪ್ಪನವರ ನಂತರ 10-12 ವರ್ಷಗಳಿಂದ ನಮ್ಮ ಜನಾಂಗದ ಯಾರೊಬ್ಬ ವ್ಯಕ್ತಿಗೂ ಯಾವುದೇ ರಾಜಕೀಯ ಪಕ್ಷ ಸಚಿವರನ್ನಾಗಿ ಮಾಡಲಿಲ್ಲ. ಕೃಷ್ಣಪ್ಪನವರು ಸಚಿವರಾಗಿದ್ದಾಗ ರಾಜ್ಯದಲ್ಲಿ ಬಹಳಷ್ಟು ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದರು. ಅನಂತರದಲ್ಲಿ ನಮ್ಮ ಜನಾಂಗದ ಯಾರಿಗೂ ಅವಕಾಶ ಸಿಕ್ಕಿಲ್ಲ’ ಎಂದರು.

‘ಆದರೆ ಈಗ ನಮ್ಮ ಜನಾಂಗದ ಪೂರ್ಣಿಮಾ ಅವರು ಹಿರಿಯೂರಿನಿಂದ ಶಾಸಕಿಯಾಗಿ ಆಯ್ಕೆಯಾಗಿದ್ದು ಅವರು ಕೃಷ್ಣಪ್ಪನವರ ಮಗಳಾಗಿದ್ದು ತಂದೆಯಂತೆ ರಾಜ್ಯದ ಪರವಾಗಿ ಕಳಕಳಿ ಉಳ್ಳವರಾಗಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ರಾಜ್ಯದಲ್ಲಿ ಯಾದವ ಜನಾಂಗದ 30 ಲಕ್ಷಕ್ಕೂ ಹೆಚ್ಚು ಜನರಿದ್ದು ನಮ್ಮ ಪ್ರತಿನಿಧಿಯಾಗಿ ಯಾರೂ ಇಲ್ಲದಿರುವುದು ಬೇಸರದ ಸಂಗತಿ. ಪೂರ್ಣಿಮಾ ಶ್ರೀನಿವಾಸರವರು ನಮ್ಮ ಜನಾಂಗದ ಮೊದಲ ಶಾಸಕಿಯಾಗಿದ್ದು ಅವರು ಸಚಿವರಾದರೆ ಜನಾಂಗಕ್ಕೆ ಸಿಗಬೇಕಾದ ಸ್ಥಾನಮಾನ, ವಿದ್ಯಾಭ್ಯಾಸಕ್ಕೆ ಸಹಾಯವಾಗಲಿದೆ. ಆದ್ದರಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅವರಿಗೆ ದಯವಿಟ್ಟು ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು’ ಎಂದು ವಿನಂತಿಸಿದರು.

ಸಭೆಯಲ್ಲಿ ಸಂಘದ ಗೌರವ ಅಧ್ಯಕ್ಷ ರಮೇಶ್, ಉಪಾಧ್ಯಕ್ಷ ನಟರಾಜ್, ಪ್ರಧಾನ ಕಾರ್ಯದರ್ಶಿ ಮುನಿರಾಜ್, ಖಜಾಂಚಿ ನಾಗರಾಜ್ ಹಾಗೂ ಪಧಾದಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.