ಗೌರಿಬಿದನೂರು: ತಾಲ್ಲೂಕಿನ ಗ್ರಾಮವೊಂದರಲ್ಲಿ ಅಂಗವಿಕಲ ಮಹಿಳೆಯೊಬ್ಬರಿಗೆ ತಿಂಡಿ ಆಸೆ ತೋರಿಸಿ ಅತ್ಯಾಚಾರ ಎಸಗಿದ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ರಾಮಾಂಜಿ ಬಂಧಿತ ಆರೋಪಿ. ನಾಲ್ಕು ವರ್ಷದ ಮಗುವಿರುವ 27 ವರ್ಷದ ಶ್ರವಣದೋಷವುಳ್ಳ ಮಹಿಳೆಗೆ ಎದುರು ಮನೆಯ ವ್ಯಕ್ತಿ ತಿಂಡಿ ಮತ್ತು ಹಣದ ಆಸೆ ತೋರಿಸಿ ಅತ್ಯಾಚಾರ ಎಸೆಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.