ADVERTISEMENT

ಮಳೆಗೆ ನೆಲ ಕಚ್ಚಿದ ಹುರುಳಿಕಾಯಿ ಫಸಲು: ನಷ್ಟ

​ಪ್ರಜಾವಾಣಿ ವಾರ್ತೆ
Published 25 ಮೇ 2019, 13:16 IST
Last Updated 25 ಮೇ 2019, 13:16 IST
ಆಲಿಕಲ್ಲು ಮಳೆಗೆ ನೆಲಕಚ್ಚಿರುವ ಹುರುಳಿ ಕಾಯಿ ಫಸಲಿನ ಚಪ್ಪರ
ಆಲಿಕಲ್ಲು ಮಳೆಗೆ ನೆಲಕಚ್ಚಿರುವ ಹುರುಳಿ ಕಾಯಿ ಫಸಲಿನ ಚಪ್ಪರ   

ದೇವನಹಳ್ಳಿ: ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಕೆ.ಹೊಸೂರು ಗ್ರಾಮದ ರೈತ ಮುನಿನಂಜಪ್ಪ ಅವರ ಹುರುಳಿಕಾಯಿ (ಬೀನ್ಸ್) ಫಸಲಿನ ಚಪ್ಪರ ಸಂಪೂರ್ಣ ನೆಲ ಕಚ್ಚಿದೆ.

ರೈತ ಮುನಿನಂಜಪ್ಪ ಮಾತನಾಡಿ ‘ರಭಸದ ಗಾಳಿ ಜತೆಗೆ ಆಲಿಕಲ್ಲು ಸಹಿತ ಮಳೆಯಾಗಿದೆ. ಇದರಿಂದ ಒಂದೂವರೆ ಎಕರೆ ಫಸಲಿನ ಚಪ್ಪರ ಬುಡ ಸಮೇತ ಹಾಳಾಗಿದೆ’ ಎಂದು ತಿಳಿಸಿದರು.

‘ಒಂದು ಕೆ.ಜಿ.ಹುರುಳಿಕಾಯಿಗೆ ಮಾರುಕಟ್ಟೆಯಲ್ಲಿ ₹70ರಿಂದ ₹80 ರೂಪಾಯಿ ಬೆಲೆ ಇದೆ. ಚಿಲ್ಲರೆ ಮಾರಾಟ ಮಾಡಿದರೆ ₹90ರಿಂದ ₹100 ರೂಪಾಯಿಗೆ ಮಾರಬಹುದು. ಜತೆಗೆ ಅರ್ಧ ಎಕರೆ ಚೆಂಡು ಹೂವಿನ ಬೆಳೆ ನಷ್ಟವಾಗಿದೆ’ ಎಂದು ಕಣ್ಣೀರಿಟ್ಟರು.

ADVERTISEMENT

ಮಳೆಯಿಂದಾಗಿ ₹6ರಿಂದ ₹7ಲಕ್ಷ ಬೆಳೆ ನಷ್ಟವಾಗಿದೆ ಎಂದು ಬೆಳೆ ವಿಸ್ತರಣಾಧಿಕಾರಿಗಳು ಅಂದಾಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.