ADVERTISEMENT

ಘಾಟಿ ಜಾತ್ರೆಯಲ್ಲಿ ಹಳ್ಳಿಕಾರ್ ಮೋಡಿ!

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 2:00 IST
Last Updated 15 ಡಿಸೆಂಬರ್ 2025, 2:00 IST
ವಿಜಯಪುರ ಹಳ್ಳಿಕಾರ್ ಹೋರಿಗಳ ಮಾಲೀಕ ಮರವೇ ನಾರಾಯಣಪ್ಪ ಅವರನ್ನು ವಿಜಯಪುರ ಟೌನ್ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.
ವಿಜಯಪುರ ಹಳ್ಳಿಕಾರ್ ಹೋರಿಗಳ ಮಾಲೀಕ ಮರವೇ ನಾರಾಯಣಪ್ಪ ಅವರನ್ನು ವಿಜಯಪುರ ಟೌನ್ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಸನ್ಮಾನಿಸಿದರು.   

ವಿಜಯಪುರ (ದೇವನಹಳ್ಳಿ): ಘಾಟಿ ಕ್ಷೇತ್ರ ಸುಬ್ರಹ್ಮಣ್ಯ ದನಗಳ ಜಾತ್ರೆಯಲ್ಲಿ ವಿಜಯಪುರದ ಮರವೇ ನಾರಾಯಣಪ್ಪ ಹಾಗೂ ಕೆಂಪಣ್ಣ ಅವರ ಕುಟುಂಬದ 10 ಜೋಡಿ ಹಳ್ಳಿಕಾರ್ ಹೋರಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

`ಹಿಂದಿನಿಂದಲೂ ಹಳ್ಳಿಕಾರ್ ತಳಿಯ ಹೋರಿ, ಹಸುಗಳನ್ನು ಸಾಕುತ್ತಿದ್ದೇವೆ. ಇದರಿಂದ ಕುಟುಂಬಕ್ಕೆ ಒಳ್ಳೆಯದು ಆಗಿದೆ. ಪ್ರತಿ ಮನೆಯ ರೈತ ಹಳ್ಳಿಕಾರ್ ಹೋರಿಗಳನ್ನು ಸಾಕಬೇಕು ಎಂಬ ಉದ್ದೇಶದಿಂದ ದೇಶಿ ತಳಿಯ ರಾಸುಗಳ ಮಹತ್ವ ತಿಳಿಸುವ ಸಲುವಾಗಿ ಪ್ರತಿ ವರ್ಷ ಘಾಟಿ ಜಾತ್ರೆಯಲ್ಲಿ ಹಳ್ಳಿಕಾರ್ ಹೋರಿಗಳೊಂದಿಗೆ ಭಾಗವಹಿಸುತ್ತಿದ್ದೇವೆ. ವೀಕ್ಷಣೆಗೆ ಬಂದವರಿಗೆ ಊಟದ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ' ಎಂದು ಹಳ್ಳಿಕಾರ್ ಹೋರಿಗಳ ಮಾಲೀಕ ಮರವೇ ನಾರಾಯಣಪ್ಪ ತಿಳಿಸಿದರು.

ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಿಜಯಪುರ ಟೌನ್ ಒಕ್ಕಲಿಗರ ಸಂಘದ ಪದಾಧಿಕಾರಿಗಳು, ನಾರಾಯಣಪ್ಪ ಹಾಗೂ ಕೆಂಪಣ್ಣನವರಿಗೆ ಸನ್ಮಾನಿಸಿದರು. ಸಂಘದ ಅಧ್ಯಕ್ಷ ಎಂ.ಬೈರೇಗೌಡ, ಉಪಾಧ್ಯಕ್ಷ ಸಿ.ಮುನಿಕೃಷ್ಣ, ರಾಜ್‍ಕುಮಾರ್, ಕಾರ್ಯದರ್ಶಿ ನವೀನ್ ಕುಮಾರ್, ಸಹ ಕಾರ್ಯದರ್ಶಿ ಮಧುಕುಮಾರ್, ರಘು, ಸುರೇಶ್, ನವೀನ್, ಮೋಹನ್ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT