ADVERTISEMENT

ಅಂಡರ್‌ಪಾಸ್‌ಗಳಲ್ಲಿ ನೀರು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 4:52 IST
Last Updated 21 ನವೆಂಬರ್ 2021, 4:52 IST
ಆನೇಕಲ್ ತಾಲ್ಲೂಕಿನ ಅರವಂಟಿಕೆಪುರ ರೈಲ್ವೆ ಅಂಡರ್‌ಪಾಸ್ ಬಳಿ ಸಿಲುಕಿಕೊಂಡಿದ್ದ ಕಾರನ್ನು ಟ್ರಾಕ್ಟರ್ ಮೂಲಕ ಹೊರ ತೆಗೆಯಲಾಯಿತು
ಆನೇಕಲ್ ತಾಲ್ಲೂಕಿನ ಅರವಂಟಿಕೆಪುರ ರೈಲ್ವೆ ಅಂಡರ್‌ಪಾಸ್ ಬಳಿ ಸಿಲುಕಿಕೊಂಡಿದ್ದ ಕಾರನ್ನು ಟ್ರಾಕ್ಟರ್ ಮೂಲಕ ಹೊರ ತೆಗೆಯಲಾಯಿತು   

ಆನೇಕಲ್: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ವಿವಿಧೆಡೆ ರೈಲ್ವೆ ಅಂಡರ್‌ಪಾಸ್‌ ನೀರಿನಿಂದ ತುಂಬಿದ್ದು, ವಾಹನ ಸಂಚಾರಕ್ಕೆ ಪರದಾಡುವಂತಾಗಿದೆ.

ಆನೇಕಲ್‌ ತಾಲ್ಲೂಕಿನ ಅರವಂಟಿಕೆಪುರ, ಬಿದರಗೆರೆ, ಮಾರನಾಯಕನಹಳ್ಳಿ, ಹುಸ್ಕೂರು, ಹೀಲಲಿಗೆ ಸೇರಿದಂತೆ ಐದಾರು ಸ್ಥಳಗಳಲ್ಲಿ ರೈಲ್ವೆ ಅಂಡರ್‌ಪಾಸ್‌ಗಳಲ್ಲಿ ಮಳೆ ನೀರು ತುಂಬಿಕೊಂಡಿದೆ.

ಶನಿವಾರ ಬೆಳಗ್ಗೆ ಅರವಂಟಿಕೆಪುರ ರೈಲ್ವೆ ಅಂಡರ್‌ಪಾಸ್‌ನಲ್ಲಿ ಸಿಲುಕಿಕೊಂಡುಕಾರೊಂದನ್ನು ಟ್ರಾಕ್ಟರ್‌ ಮೂಲಕ ಹೊರ ತೆಗೆಯಲಾಯಿತು.ಹೀಲಲಿಗೆಯ ರೈಲ್ವೇ ಅಂಡರ್‌ಪಾಸ್‌ನಲ್ಲಿಯೂ ನೀರು ತುಂಬಿದ್ದು, ವಾಹನಗಳ ಸಂಚಾರ ಸ್ಥಗಿತವಾಗಿದೆ. ದೊಮ್ಮಸಂದ್ರ, ಮುತ್ತಾನಲ್ಲೂರು ಮತ್ತಿತರ ಕಡೆಗಳಿಗೆ ಚಂದಾಪುರದಿಂದ ಹೋಗಬೇಕಾದ ಸಾರ್ವಜನಿಕರು ಪರದಾಡಿದರು.

ADVERTISEMENT

ಶಾಲೆಗೆ ಹೋಗಲುವಿದ್ಯಾರ್ಥಿಗಳು ಅರವಂಟಿಕೆಪುರ ರಸ್ತೆಯನ್ನು ಬಿಟ್ಟು ಕರ್ಪೂರು ಮೂಲಕ ಪರ್ಯಾಯ ಮಾರ್ಗಗಳಲ್ಲಿ ಓಡಾಡುತ್ತಿದ್ದಾರೆ. ಈ ರಸ್ತೆ ಸಂಪೂರ್ಣ ಬಂದ್‌ ಆಗಿದೆ. ಹಾಗಾಗಿ ಅಂಡರ್‌ಪಾಸ್‌ಗಳಿರುವ ಹೀಲಲಿಗೆ, ಅರಂಟಿಕೆಪುರ ಮತ್ತು ಹುಸ್ಕೂರು ಬಳ ವಾಹನ ಸಂಚಾರ ಸ್ಥಗಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.