ADVERTISEMENT

ಕೆರೆ ಉಳಿಸಲು ಪಾದಯಾತ್ರೆ ನಾಳೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 2:34 IST
Last Updated 1 ಜುಲೈ 2022, 2:34 IST
ಸೂಲಿಬೆಲೆ ಹೋಬಳಿಯ ಅರಸನಹಳ್ಳಿಯಲ್ಲಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಎಂ.ಟಿ.ಬಿ. ನಾಗರಾಜ್ ಭೂಮಿಪೂಜೆ ನೆರವೇರಿಸಿದರು
ಸೂಲಿಬೆಲೆ ಹೋಬಳಿಯ ಅರಸನಹಳ್ಳಿಯಲ್ಲಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಎಂ.ಟಿ.ಬಿ. ನಾಗರಾಜ್ ಭೂಮಿಪೂಜೆ ನೆರವೇರಿಸಿದರು   

ಆನೇಕಲ್: ‘ನಮ್ಮ ಕೆರೆ- ನಮ್ಮ ಹಕ್ಕು’ ಎಂಬ ಘೋಷಣೆಯೊಂದಿಗೆ ತಾಲ್ಲೂಕಿನ ಮುತ್ತಾನಲ್ಲೂರು ಕೆರೆ ವ್ಯಾಪ್ತಿಗೆ ಒಳಪಡುವ ವಿವಿಧ ಗ್ರಾಮದ ಸಾರ್ವಜನಿಕರು ಮುತ್ತಾನಲ್ಲೂರಿನಿಂದ ಬೊಮ್ಮಸಂದ್ರದವರೆಗೂ ಶನಿವಾರ (ಜು.2) ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಡಾ.ಚಿನ್ನಪ್ಪ ವೈ. ಚಿಕ್ಕಹಾಗಡೆ ತಿಳಿಸಿದ್ದಾರೆ.

ಮುತ್ತಾನಲ್ಲೂರು ಅಮಾನಿಕೆರೆಗೆ ಚಂದಾಪುರ ಚೋಳರ ಕೆರೆಯಿಂದ ಕಲುಷಿತ ನೀರು ಹರಿದು ಬರುತ್ತಿದೆ. ಇದರಿಂದ ಕೆರೆ ಕಲುಷಿತಗೊಂಡಿದೆ ಎಂದು ದೂರಿದ್ದಾರೆ.

ಕೆರೆಗೆ ಕಲುಷಿತ ನೀರು ಹರಿಯುವುದನ್ನು ತಡೆಯಲು ಒತ್ತಾಯಿಸಿ ಮುತ್ತಾನಲ್ಲೂರು ಕೆರೆ ವ್ಯಾಪ್ತಿಯ ವಿವಿಧ ಗ್ರಾಮಗಳಿಂದ ಸಾರ್ವಜನಿಕರು ನಮ್ಮ ಕೆರೆ; ನಮ್ಮ ಹಕ್ಕು ಎಂಬ ಘೋಷವಾಕ್ಯ
ದೊಂದಿಗೆ ಚಂದಾಪುರ ಪುರ
ಸಭೆ, ಪರಿಸರ ಮಾಲಿನ್ಯ
ನಿಯಂತ್ರಣ ಮಂಡಳಿ, ಬೊಮ್ಮಸಂದ್ರದ ಸ್ಪರ್ಶ ಆಸ್ಪತ್ರೆ, ನಾರಾಯಣ ಹೃದಯಾಲಯ, ಬೊಮ್ಮಸಂದ್ರ ಕೈಗಾರಿಕಾ ಸಂಘದವರೆಗೂ ಪಾದಯಾತ್ರೆ ನಡೆಸಲಿದ್ದಾರೆ. ಕಲುಷಿತ ನೀರನ್ನು ಕೆರೆಗೆ ಬಿಡಬಾರದು ಎಂದು ಒತ್ತಾಯಿಸಿ ಮನವಿ ಸಲ್ಲಿಸಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.