
ವಿಜಯಪುರ (ದೇವನಹಳ್ಳಿ): ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ವಿಜಯಪುರದಿಂದ ಹಿಂದೂ ಸಮಾಜೋತ್ಸವ ಹಾಗೂ ಶೋಭಾಯಾತ್ರೆ ಕಾರ್ಯಕ್ರಮ ಮಂಗಳವಾರ ನಡೆಯಿತು.
ಜಿಲ್ಲಾ ಗ್ರಂಥಾಲಯ ಆವರಣದಲ್ಲಿ ಪದಾಧಿಕಾರಿಗಳು ಗೋವು ಪೂಜೆ ಸಲ್ಲಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಶೋಭಾಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು, ದೇವರ ಪಲ್ಲಕ್ಕಿ, ಭಜನೆ ಕಲಾತಂಡ ಸೇರಿಂದತೆ ನೂರಕ್ಕೆ ಹೆಚ್ಚು ಮಕ್ಕಳ ವಿವಿಧ ವೇಷಭೂಷಣ ತೊಟ್ಟು, ಶಿವಗಣೇಶ ವೃತ್ತ, ಬಸ್ ನಿಲ್ದಾಣ, ಕೋಲಾರ ರಸ್ತೆ, ಟೋಲ್ ಗೇಟ್, ಗುರುಪ್ಪನ ಮಠ, ಜೆ.ಎಂ ಸರ್ಕಲ್, ಎಲ್ಲಮ್ಮ ತಾಯಿ ವೃತ್ತ, ಗಾಂಧಿಚೌಕ, ಬಜಾರ್ ರಸ್ತೆ, ಹಳೆ ಪುರಸಭೆ ಸರ್ಕಲ್‌ನಲ್ಲಿ ಶೋಭಾಯಾತ್ರೆ ಮುಕ್ತಾಯಗೊಂಡಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಕಾರ್ಯಕಾರಣಿ ಸದಸ್ಯ ರಾಧಾಕೃಷ್ಣ ಹೊಳ್ಳ, ಹಿಂದೂ ಸಮಾಜೋತ್ಸವ ಆಚರಣೆ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರು ವರ್ಷದ ಹಿನ್ನೆಲೆಯಲ್ಲಿ ಸಾಮರಸ್ಯ, ಕುಟುಂಬ ಪ್ರಭೋದನ್, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನ ಶೈಲಿ, ನಾಗರಿಕ ಶಿಷ್ಟಾಚಾರದ ಬಗ್ಗೆ ವಿವರಿಸಿದರು.
ಸಮಿತಿಯ ತಾಲ್ಲೂಕು ಉಪಾಧ್ಯಕ್ಷೆ ದೀಪ ರಮೇಶ್, ಪದಾಧಿಕಾರಿಗಳು, ವಿವಿಧ ಧಾರ್ಮಿಕ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.