ಹೊಸಕೋಟೆ ನಗರದ ಟೋಲ್ ಬಳಿ ಸಂಪರ್ಕ ರಸ್ತೆಯ ಸೇತುವೆ ಕಾಮಗಾರಿಯನ್ನು ಶಾಸಕ ಶರತ್ ಬಚ್ಚೆಗೌಡ ಪರಿಶೀಲಿಸಿದರು
ಹೊಸಕೋಟೆ: ನಗರದ ಟೋಲ್ ಬಳಿ ಸಂಪರ್ಕ ಸೇತುವೆ ಕಾಮಗಾರಿಯನ್ನು ಶಾಸಕ ಶರತ್ ಬಚ್ಚೇಗೌಡ ಮಂಗಳವಾರ ಪರಿಶೀಲಿಸಿದರು.
ನಗರದ 27ನೇ ವಾರ್ಡ್‌ನ ದೊಡ್ಡಗಟ್ಟಿಗನಬ್ಬೆ ಮುಖ್ಯರಸ್ತೆ ದೂಪನಹಳ್ಳಿಯಿಂದ ದೊಡ್ಡ ಅಮಾನಿಕೆರೆ ಕೋಡಿ ಮಾರ್ಗವಾಗಿ ಬೆಂಗಳೂರು ಮುಖ್ಯರಸ್ತೆವರೆಗೆ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುವುದು. ತಾಲ್ಲೂಕು ಹಾಗೂ ನಗರ ಸಾರ್ವಜನಿಕರಿಗೆ ಟ್ರಾಫಿಕ್ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ದೊಡ್ಡ ಅಮಾನಿಕೆರೆ ಕೋಡಿ ಬಳಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ ಅಡ್ಡಲಾಗಿ ₹3 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುತ್ತಿದೆ ಎಂದರು.
ಹೊಸಕೋಟೆ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ವಿ.ಬೈರೇಗೌಡ ಮತ್ತಿತರ ಅಧಿಕಾರಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.